ಶಿವಮೊಗ್ಗದಲ್ಲಿ ಮತ್ತೆ ಹರಿದ ನೆತ್ತರು..
Cnewstv.in / 03.08.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗದಲ್ಲಿ ಮತ್ತೆ ಹರಿದ ನೆತ್ತರು..
ಶಿವಮೊಗ್ಗ : ನಗರದಲ್ಲಿ ಇಂದು ಬೆಳಿಗ್ಗೆ ಮತ್ತೆ ಬರ್ಬರ ಹತ್ಯೆಯಾಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ.
ಶಿವಮೊಗ್ಗದ ಗಾಡಿಕೊಪ್ಪದ ಬಳಿಯಿರುವ ಗಂಧರ್ವ ಬಾರ್ ಸಮೀಪ ಹೊಸಮನೆ ಯುವಕ ಕಿರಣ್ ಕುಮಾರ್ (ಪುಚ್ಚಿ ಕಿರಣ್) ಎಂಬಾತನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಕಿರಣ್ ಮತ್ತು ಆತನ ಇಬ್ಬರು ಸ್ನೇಹಿತರಾದ ಪ್ರಜ್ವಲ್, ಕಾರ್ತಿಕ್ ನಡುವೆ ಮಾತಿನ ಚಕಮಕಿ ಆಗಿದ್ದು ನಂತರ ಅದು ಕೊಲೆಯ ಹಂತಕ್ಕೆ ಹೋಗಿದೆ. ಮಧ್ಯದ ಅಮಲಿನಲ್ಲಿದ್ದ ಇಬ್ಬರು ಸ್ನೇಹಿತರು ಕಿರಣ್ ನನ್ನು ಬಿಯರ್ ಬಾಟಲಿಯಿಂದ ಇರಿದು, ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ.
ಈ ಸಂಬಂಧವನ್ನು ವಿನೋಭನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಒದಿ : https://cnewstv.in/?p=10705
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಶಿವಮೊಗ್ಗದಲ್ಲಿ ಮತ್ತೆ ಹರಿದ ನೆತ್ತರು.. 2022-08-03