Breaking News

ಅಪರಿಚಿತ ವ್ಯಕ್ತಿ ಶವ ಪತ್ತೆ.

Cnewstv.in / 27.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಅಪರಿಚಿತ ವ್ಯಕ್ತಿ ಶವ ಪತ್ತೆ.

ಶಿವಮೊಗ್ಗ : ಜುಲೈ 21 ರಂದು ಸಂಜೆ ನಗರದ ಗೋಪಿ ಸರ್ಕಲ್ ಬಳಿ ಇರುವ ಶ್ರೀ ದೇವರಾಜ ಅರಸು ವಾಣಿಜ್ಯ ಸಂಕೀರ್ಣದ ಬಳಿ ಸುಮಾರು 40 ರಿಂದ 45 ವಯಸ್ಸಿನ ಅನಾಮಧೇಯ ಪುರಷ ಕಟ್ಟೆಯ ಮೇಲೆ ಮಲಗಿದ ಸ್ಥಳದಲ್ಲೇ ಮೃತಪಟ್ಟಿದ್ದು ಶವನ್ನು ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಮೃತ ವ್ಯಕ್ತಿಯು ಸುಮಾರು 05 ಅಡಿ 5 ಇಂಚು ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ತಲೆಯಲ್ಲಿ 2 ಇಂಚು ಉದ್ದದ ಕಪ್ಪು ಕೂದಲು ಇದ್ದು ಗಡ್ಡ ಬಿಟ್ಟಿರುತ್ತಾನೆ. ಕೆಂಪು ಮತು ಕಪ್ಪು ಚೆಕ್ಸ್ ಇರುವ ಅರ್ಧ ತೋಳಿನ ಶರ್ಟ್ ಮತ್ತು ಕಡು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಮೃತ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆAದು ಪ್ರಕಟಣೆ ತಿಳಿಸಿದೆ.

ಇದನ್ನು ಒದಿ : https://cnewstv.in/?p=10663

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*