Breaking News

ಮಾಸಿಕ ಕೆಡಿಪಿ ಸಭೆ : ಜಲಜೀವನ್ ಮಿಷನ್ ಯೋಜನೆ ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು – ಡಾ.ಎಸ್.ಸೆಲ್ವಕುಮಾರ್

Cnewstv.in / 25.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಮಾಸಿಕ ಕೆಡಿಪಿ ಸಭೆ : ಜಲಜೀವನ್ ಮಿಷನ್ ಯೋಜನೆ ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು – ಡಾ.ಎಸ್.ಸೆಲ್ವಕುಮಾರ್.

ಶಿವಮೊಗ್ಗ : ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆಯನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಅವರು ತಿಳಿಸಿದರು.

ಜಲಜೀವನ್ ಮಿಷನ್ ಪ್ರಥಮ ಹಂತದಲ್ಲಿ 666 ಜನವಸತಿಗಳಿಗೆ ನೀರು ಪೂರೈಸಲು, 626 ಕಾಮಗಾರಿಗಳಿಗೆ 148ಕೋಟಿ ರೂ. ಮಂಜೂರಾಗಿದ್ದು, 591ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಬಾಕಿ ಕಾಮಗಾರಿಗಳು ಅನುಷ್ಟಾನ ಹಂತದಲ್ಲಿವೆ. ಯೋಜನೆಯ ಎರಡನೇ ಹಂತದಲ್ಲಿ 540 ಜನವಸತಿಗಳಿಗೆ ನೀರು ಒದಗಿಸಲು 136ಕೋಟಿ ರೂ. ಮಂಜೂರಾಗಿದ್ದು, ಕಾರ್ಯಾದೇಶ ನೀಡಲಾಗಿರುವ 389ಕಾಮಗಾರಿಗಳ ಪೈಕಿ 77ಕಾಮಗಾರಿಗಳು ಪೂರ್ಣಗೊಂಡಿವೆ. 3ಹಂತದಲ್ಲಿ 884ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, 77ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಿ: ಫಲಾನುಭವಿಗಳ ಆಯ್ಕೆ, ಟೆಂಡರ್ ಪ್ರಕ್ರಿಯೆಗಳನ್ನು ಎಲ್ಲಾ ಇಲಾಖೆಗಳು ಡಿಸೆಂಬರ್ ಅಂತ್ಯದ ಒಳಗಾಗಿ ಪೂರ್ಣಗೊಳಿಸಿ ಕಾಮಗಾರಿಗಳ ಅನುಷ್ಟಾನವನ್ನು ಆರಂಭಿಸಬೇಕು. ಅನುಷ್ಟಾನ ಕಾರ್ಯಕ್ಕಾಗಿ ಮಾರ್ಚ್‍ವರೆಗೆ ವಿಳಂಬಿಸಬಾರದು ಎಂದು ಡಾ.ಸೆಲ್ವಕುಮಾರ್ ಅವರು ಸ್ಪಷ್ಟಪಡಿಸಿದರು.

ರಸಗೊಬ್ಬರ ಸರಿಯಾಗಿ ಹಂಚಿಕ ಮಾಡಿ: ಜಿಲ್ಲೆಯಲ್ಲಿ ಬಿತ್ತನೆ ಕಾರ್ಯಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ರಸಗೊಬ್ಬರ ಸಮಪರ್ಕವಾಗಿ ಹಂಚಿಕೆಯಾಗುವಂತೆ ಎಚ್ಚರಿಕೆ ವಹಿಸಬೇಕು. ಜಿಲ್ಲೆಯಲ್ಲಿ ರಸಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಅಗತ್ಯವಿರುವ ಕಡೆ ಹಂಚಿಕೆಯಾಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ಇದನ್ನು ಒದಿ : https://cnewstv.in/?p=10629

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*