Breaking News

ದೆಹಲಿಯಲ್ಲಿ ಮೊದಲ ಮಂಕಿಪ್ರಾಕ್ಸ್ ಪ್ರಕರಣ ಪತ್ತೆ.

Cnewstv.in / 25.07.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ದೆಹಲಿಯಲ್ಲಿ ಮೊದಲ ಮಂಕಿಪ್ರಾಕ್ಸ್ ಪ್ರಕರಣ ಪತ್ತೆ.

ನವದೆಹಲಿ : ದೆಹಲಿಯಲ್ಲಿ ಮೊದಲ ಮಂಕಿಪ್ರಾಕ್ಸ್ ಪ್ರಕರಣ ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ನಾಲ್ಕಕ್ಕೇರಿದೆ.

ಇಷ್ಟು ದಿನ ಕೇರಳ ರಾಜ್ಯದಲ್ಲಿ ಮಾತ್ರ ಪತ್ತೆಯಾಗಿದ್ದ ಮಂಕಿಪ್ರಾಕ್ಸ್ ಪ್ರಕರಣ ಇದೀಗ ರಾಷ್ಟ್ರರಾಜಧಾನಿಯಲ್ಲಿ ಸಹ ಕಂಡು ಬಂದಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ವರದಿಯನ್ನು ದೃಢಪಡಿಸಿದೆ.

27 ವರ್ಷದ ಪಶ್ಚಿಮ‌ ದೆಹಲಿಯ ವ್ಯಕ್ತಿಯಲ್ಲಿ ಮಂಕಿಪ್ರಾಕ್ಸ್ ಕಾಣಿಸಿಕೊಂಡಿದ್ದು, ಈತನು ಯಾವುದೇ ವಿದೇಶ ಪ್ರಯಾಣವನ್ನು ಮಾಡಿಲ್ಲ, ಮೂರು ದಿನಗಳ ಹಿಂದೆ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನಲ್ಲಿ ಜ್ವರ ಹಾಗೂ ಚರ್ಮದ ಗಾಯಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.‌ ನಂತರ ಇವರ ಮಾದರಿಯನ್ನು ಪುಣೆಯ ಎನ್ ಐವಿ ಗೆ ಕಳುಹಿಸಲಾಗಿತ್ತು. ಅಲ್ಲಿ ಪಾಸಿಟಿವ್ ವರದಿ ದೃಢಪಟ್ಟಿದೆ.

ಮಂಕಿಪಾಕ್ಸ್ ಪ್ರಕರಣಗಳು ಈಗಾಗಲೇ 75ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಿಸಿದೆ. ಹದಿನಾರು ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಐದು ಮಂದಿ ಮೃತಪಟ್ಟಿದ್ದಾರೆ.

ಇದನ್ನು ಒದಿ : https://cnewstv.in/?p=10624

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*