ಕರ್ನಾಟಕ ಉದ್ಯೋಗ ನೀತಿಗೆ, ಸಚಿವ ಸಂಪುಟ ಅನುಮೋದನೆ.
Cnewstv.in / 25.07.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕರ್ನಾಟಕ ಉದ್ಯೋಗ ನೀತಿಗೆ, ಸಚಿವ ಸಂಪುಟ ಅನುಮೋದನೆ.
ಬೆಂಗಳೂರು : ಕರ್ನಾಟಕ ಉದ್ಯೋಗ ನೀತಿ 2025 ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಆ ಮೂಲಕ ಮೂರು ವರ್ಷಗಳಲ್ಲಿ 7.50 ಲಕ್ಷ ಉದ್ಯೋಗ ಸೃಷ್ಟಿ ಗುರಿ ಹೊಂದಿದೆ.
ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ನೀಡುವುದು. ಯಾವುದೇ ಕೈಗಾರಿಕೆ ತಾನು ಹೂಡುವ ಬಂಡವಾಳಕ್ಕೆ ಅನುಗುಣವಾಗಿ ಉದ್ಯೋಗ ಅವಕಾಶವನ್ನು ನೀಡಬೇಕು ಎಲ್ಲಾ ಶ್ರೇಣಿಗಳನ್ನು ಕನ್ನಡಿಗರಿಗೆ ಆದ್ಯತೆ ನೀಡುವುದನ್ನು ಕಡ್ಡಾಯ ಗೊಳಿಸುವುದೇ ಇದರ ಉದ್ದೇಶ.
ಒಟ್ಟಾರೆ ಕೈಗಾರಿಕಾ ನೀತಿ ಮೂಲಕ ಮೂರು ವರ್ಷಗಳಲ್ಲಿ 3.50 ಲಕ್ಷ ಉದ್ಯೋಗ ಹಾಗೂ ‘ಜವಳಿ ಮತ್ತು ಗಾರ್ಮೆಂಟ್ ನೀತಿ’ಯಡಿ ಎರಡು ವರ್ಷಗಳಲ್ಲಿ 4 ಲಕ್ಷ ಉದ್ಯೋಗ ಸೃಷ್ಟಿಸುವ ಮೂಲಕ ಒಟ್ಟು 7.50 ಲಕ್ಷ ಉದ್ಯೋಗಾವಕಾಶ ಸೃಷ್ಟಿ ನಿರೀಕ್ಷೆ ಹೊಂದಲಾಗಿದೆ.
ಮಧ್ಯಮ, ದೊಡ್ಡ, ಮೆಗಾ, ಅಲ್ಟ್ರಾ-ಮೆಗಾ ಮತ್ತು ಸೂಪರ್-ಮೆಗಾ ಉದ್ಯಮಗಳಲ್ಲಿ ಹೆಚ್ಚುತ್ತಿರುವ ಹೂಡಿಕೆಗೆ ಹೆಚ್ಚುವರಿ ಉದ್ಯೋಗಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸುವಂತೆ ಮಾರ್ಗಸೂಚಿ ರೂಪಿಸಲಾಗಿದೆ.
ಹೂಡಿಕೆದಾರರು 50 ಕೋಟಿ ರೂ. ಹೂಡಿಕೆ ಮಾಡಲು ಬಯಸಿದರೆ, 35 ರಿಂದ 50 ಉದ್ಯೋಗಗಳನ್ನು ಸೃಷ್ಟಿಸಬೇಕು ಮತ್ತು ಸೂಪರ್-ಮೆಗಾ ಇಂಡಸ್ಟ್ರಿ ವಿಭಾಗದಡಿ 100 ಕೋಟಿ ರೂ.ವರೆಗೆ ಹೂಡಿಕೆ ಮಾಡಲು ಬಯಸಿದರೆ, ಅವರು 50 ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಬೇಕು. ಈ ಎಲ್ಲಾ ಹೆಚ್ಚುವರಿ ಉದ್ಯೋಗಗಳು ಸ್ಥಳೀಯ ಕನ್ನಡಿಗರಿಗೆ ಇರುತ್ತದೆ.
ಇದನ್ನು ಒದಿ : https://cnewstv.in/?p=10618
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಕರ್ನಾಟಕ ಉದ್ಯೋಗ ನೀತಿಗೆ ಸಚಿವ ಸಂಪುಟ ಅನುಮೋದನೆ. 2022-07-24
Recent Comments