ಸಂವಿಧಾನ ನೀಡಿರುವ ಮೂಲ ಕರ್ತವ್ಯ ನಿರ್ವಹಿಸಿ : ಕೀರ್ತಿ ಗಣೇಶ್.
Cnewstv.in / 2307.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಂವಿಧಾನ ನೀಡಿರುವ ಮೂಲ ಕರ್ತವ್ಯ ನಿರ್ವಹಿಸಿ : ಕೀರ್ತಿ ಗಣೇಶ್.
ಶಿವಮೊಗ್ಗ: ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಎಲ್ಲ ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದು ಎನ್ ಎಸ್ ಯು ಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ( ಎನ್ ಎಸ್ ಯು ಐ ) ಶಿವಮೊಗ್ಗ ಜಿಲ್ಲೆ ವತಿಯಿಂದ ಶನಿವಾರ ಆಯೋಜಿಸಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೋಟ್ ಬುಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನ ಎಲ್ಲರಿಗೂ ಹಕ್ಕು ಹಾಗೂ ಮೂಲ ಸೌಲಭ್ಯಗಳನ್ನು ನೀಡಿದೆ. ಆದರೆ ಬಹುತೇಕರು ಸಂವಿಧಾನ ಒದಗಿಸಿರುವ ಮೂಲ ಕರ್ತವ್ಯಗಳನ್ನು ನಿರ್ವಹಿಸಲು ವಿಫಲರಾಗುತ್ತಿದ್ದಾರೆ. ಸಮಾಜದಲ್ಲಿ ಆಗುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಂವಿಧಾನ ನೀಡಿರುವ ಮೂಲ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ತಿಳಿಸಿದರು.

ಭಾರತ ದೇಶದ ಐತಿಹಾಸಿಕ ಮತ್ತು ಸತ್ಯ ಸಂಗತಿಗಳನ್ನು ಯುವ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಸಮಾಜದ ಎಲ್ಲ ವರ್ಗದ ಜನರಿಗೂ, ಯುವ ವಿದ್ಯಾರ್ಥಿಗಳಿಗೂ ನೈಜ ಇತಿಹಾಸದ ಬಗ್ಗೆ ತಿಳವಳಿಕೆ ಮೂಡಿಸಬೇಕು. ಸಮಾಜವನ್ನು ಸದೃಢವಾಗಿ ರೂಪಿಸುವ ನಿಟ್ಟಿನಲ್ಲಿ ಯುವಜನತೆ ಮಹತ್ತರ ಪಾತ್ರ ವಹಿಸಬೇಕು ಎಂದರು.
ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಜಿತ್, ಕೆ.ಚೇತನ್, ಸಿ.ಜಿ.ಮಧುಸೂದನ್, ಮುಖಂಡರಾದ ಎಸ್.ಪಿ.ದಿನೇಶ್, ಕಲಗೋಡು ರತ್ನಾಕರ್, ರಮೇಶ್ ಹೆಗ್ಡೆ, ವಿಜಯ್ ಕುಮಾರ್, ಯಮುನಾ ರಂಗೇಗೌಡ, ಆದರ್ಶ್, ಪ್ರಶಾಂತ್, ಹನುಮಂತು, ಮಹಮ್ಮದ್ ಆರೀಫ್, ರಾಘವೇಂದ್ರ, ಮೊಹಮ್ಮದ್ ನಿಹಾಲ್, ಮಲ್ಲಿಕ್, ಪೂರ್ಣೇಶ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನು ಒದಿ : https://cnewstv.in/?p=10613
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಂವಿಧಾನ ನೀಡಿರುವ ಮೂಲ ಕರ್ತವ್ಯ ನಿರ್ವಹಿಸಿ : ಕೀರ್ತಿ ಗಣೇಶ್. 2022-07-23