Cnewstv.in / 22.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಗುಡೇಕಲ್ ಹರೋಹರ ಜಾತ್ರೆ ಪ್ರಯುಕ್ತ ವಾಹನ ಸಂಚಾರಕ್ಕೆ ತಾತ್ಕಾಲಿಕ ಮಾರ್ಗ ಬದಲಾವಣೆ.
ಶಿವಮೊಗ್ಗ : ನಗರದ ಗುಡೇಕಲ್ ಶ್ರೀ ಬಾಲ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಅಡಿಕೃತಿಕ್ಕ ಹರೋಹರ ಜಾತ್ರೆ ನಡೆಯಲಿದ್ದು, ಜಾತ್ರೆಗೆ ಸಾವಿರಾರು ಸಂಖ್ಯೆ ಭಕ್ತಾಧಿಗಳು ದೇವಸ್ಥಾನಕ್ಕೆ ಕಾರ್, ದ್ವಿಚಕ್ರ, ಬಸ್ ಹಾಗೂ ಇತರ ವಾಹನಗಳಲ್ಲಿ ಬಂದು ಹೋಗಲಿರುತ್ತಾರೆ. ಈ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ವಾಹನಗಳ ಸಂಚಾರಕ್ಕೆ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.
ತಾತ್ಕಾಲಿಕ ಮಾರ್ಗ..
1. ಬೆಂಗಳೂರು, ಭದ್ರಾವತಿ, ಎನ್ ಆರ್ ಪುರ ಕಡೆಯಿಂದ ಬರುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಬಸ್ ಗಳು
ಮತ್ತ ಸಿಟಿ ಬಸ್ ಗಳು ಹಾಗೂ ಕಾರು ವಾಹನಗಳು ಬೈಪಾಸ್ ರಸ್ತೆ ಮುಖಾಂತರ ಹೋಗುವುದು.
2. ಶಿವಮೊಗ್ಗ ನಗರದಿಂದ ಬೆಂಗಳೂರು, ಭದ್ರಾವತಿ, ಚಿತ್ರದುರ್ಗ, ಹೊಳೆಹೊನ್ನೂರು ಹೋಗುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಬಸ್ ಗಳು ಮತ್ತು ಸಿಟಿ ಬಸ್ ಗಳು ಹಾಗೂ ಕಾರು ವಾಹನಗಳು ಬೈಪಾಸ್ ರಸ್ತೆ ಮುಖಾಂತರ
ಹೋಗುವುದು.
3. ಚಿತ್ರದುರ್ಗ ಹೊಳೆಹೊನ್ನೂರುನಿಂದ ಬರುವ ಮತ್ತು ಹೋಗು ಎಲ್ಲಾ ಭಾರಿ ವಾಹನ ಮತ್ತು ಬಸ್ ಗಳು ಭದ್ರಾವತಿ
ಮಾರ್ಗವಾಗಿ ಬೈಪಾಸ್ ರಸ್ತೆ ಮಾರ್ಗವಾಗಿ ಶಿವಮೊಗ್ಗ ನಗರಕ್ಕೆ ಹೋಗುವುದು.
4. ಹೊಳೆಹೊನ್ನೂರು ಸರ್ಕಲ್ ನಿಂದ ಗುರುಪುರದ ಯಲವಟ್ಟಿ ಕ್ರಾಸ್ ವರೆಗೆ ಸಾರ್ವಜನಿಕ ವಾಹನಗಳು ಓಡಾಡದಂತ
ನಿಷೇದಿಸಿದ.
5. ಚಿತ್ರದುರ್ಗ ಹೊಳೆಹೊನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲಾ ಲಘು ವಾಹನಗಳು ಯಲವಟ್ಟಿ ದೊಡ್ಡ ತಾಂಡ ಕ್ರಾಸ್ ನಿಂದ, ಯಲವಟ್ಟಿ ಸಣ್ಣ ತಾಂಡ,ಯಲವಟ್ಟಿ ಮಾರ್ಗವಾಗಿ ಮಲವಗೊಪ್ಪದ ಮೂಲಕ ಬಿ.ಹೆಚ್ ರಸ್ತೆಗೆ
ಸೇರಿಕೊಂಡು ಬೈಪಾಸ್ ರಸ್ತೆಯ ಮಾರ್ಗವಾಗಿ ಶಿವಮೊಗ್ಗ ನಗರಕ್ಕೆ ಹೋಗುವುದು.
6. ಶಿವಮೊಗ್ಗ ನಗರದಿಂದ ಹೊಳೆಹೊನ್ನೂರು ಚಿತ್ರದುರ್ಗಕ್ಕೆ ಹೋಗು ಲಘು ವಾಹನಗಳು (ದ್ವಿಚಕ್ರ ಮತ್ತು ಕಾರು
ವಾಹನಗಳು) ಬೈಪಾಸ್ ರಸ್ತೆಯ ಮಾರ್ಗವಾಗಿ ಮಲವಗೊಪ್ಪದ ಯಲವಟ್ಟಿ ಕ್ರಾಸ್ ನಿಂದ ಯಲವಟ್ಟಿ ಮಾರ್ಗ ದೊಡ್ಡತಾಂಡ ಕ್ರಾಸ್ ಮೂಲಕ ಹೊಳೆಹೂನ್ನೂರು ಚಿತ್ರದುರ್ಗಕ್ಕೆ ಹೋಗುವುದು.
7. ಹರಿಹರ ಹೂನ್ನಾಳಿ ಯಿಂದ ಬರುವ ಎಲ್ಲಾ ಭಾರಿ ವಾಹನ, ಎಲ್ಲಾ ಬಸ್ ಗಳನ್ನು 100 C 2/3 ನೋ ಮಾರ್ಗವಾಗಿ ಹೋಗುವುದು.
8. ಶಿವಮೊಗ್ಗ ನಗರದಿಂದ ಹೊಳೆಹೊನ್ನೂರು, ಚನ್ನಗಿರಿ, ಚಿತ್ರದುರ್ಗಕ್ಕೆ ಹೋಗುವ ಮತ್ತು ಬರುವ ಎಲ್ಲಾ ಭಾರಿ
ತುಂಗಭದ್ರ ಸೇತುವೆ ವಾಹನಗಳು ಸಂಗೂಳ್ಳಿ ರಾಯಣ್ಣ ಸರ್ಕಲ್, ಹೊನ್ನಾಳಿ ರಸ್ತೆ, ಹೊಳಲೂರು ಸನ್ಯಾಸಿಕೋಡಮಗ್ಗಿ, ಹೊಳೆಹೊನ್ನೂರು ಮೂಲಕ ಸಂಚರಿಸುವುದು.
9. ಮೇಲ್ಕಂಡ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು
ಅಂಬ್ಯೂಲೆನ್ಸ್ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತ
ಹೊರತುಪಡಿಸಿರುತ್ತದೆ.
ಇದನ್ನು ಒದಿ : https://cnewstv.in/?p=10593
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
Recent Comments