Cnewstv.in / 21.07.2022 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
600 ಕೋಟಿ ರೂಪಾಯಿ ಆಸ್ತಿಯನ್ನು ಸರ್ಕಾರಕ್ಕೆ ದಾನ ಮಾಡಿದ ಪರೋಪಕಾರಿ ವೈದ್ಯ.
ಲಕ್ನೋ : ಉತ್ತರಪ್ರದೇಶದ ಮೊರದಾಬಾದ್ ನ ವೈದ್ಯನೊಬ್ಬ ತನ್ನ 600 ಕೋಟಿ ರೂಪಾಯಿ ಆಸ್ತಿಯನ್ನು ಯುಪಿಎ ಸರ್ಕಾರಕ್ಕೆ ದಾನಮಾಡಿದ್ದಾರೆ.
ಡಾ. ಅರವಿಂದ ಗೋಯಲ್ ಕಳೆದ 50 ವರ್ಷಗಳಿಂದ ವೈದ್ಯಕೀಯ ಸೇವೆ ಮಾಡುತ್ತಿದ್ದ, ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ತನ್ನ ಆಸ್ತಿಯನ್ನು ಸರ್ಕಾರಕ್ಕೆ ದಾನ ಮಾಡಿದ್ದಾರೆ. ಇವರ ತಂದೆ ಪ್ರಮೋದ್ ಕುಮಾರ್ ಮತ್ತು ತಾಯಿ ಶಕುಂತಲಾದೇವಿ ಸ್ವತಂತ್ರ ಹೋರಾಟಗಾರರಾಗಿದ್ದರು.
ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಮೊರದಾಬಾದ್ ನಾ 50 ಹಳ್ಳಿಗಳನ್ನು ದತ್ತು ತೆಗೆದುಕೊಂಡಿದ್ದರು. ಜನರಿಗೆ ಉಚಿತ ಚಿಕಿತ್ಸೆ ನೀಡಿದರು. ಬಡವರಿಗೆ ಉಚಿತ ಶಿಕ್ಷಣದ ವ್ಯವಸ್ಥೆಯನ್ನು ಸಹ ಮಾಡಿದ್ದರು.
ಅರವಿಂದ್ ಗೋಯಲ್ ಅವರು ದಾನ ಮಾಡಿರುವ ಆಸ್ತಿಯ ಮೌಲ್ಯವನ್ನು ನಿರ್ಧಾರ ಮಾಡಲು ಸರ್ಕಾರವು ಐದು ಜನರ ಸದಸ್ಯ ಸಮಿತಿಯನ್ನು ರಚಿಸಿದೆ. ಆಸ್ತಿ ಮಾರಾಟದಿಂದ ಬಂದ ಹಣವನ್ನು ಅನಾಥರಿಗೆ, ಬಡವರಿಗೆ ಉಚಿತ ಶಿಕ್ಷಣ ಹಾಗೂ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರತಿಭಾ ಪಾಟೀಲ್, ಡಾ. ಎಪಿಜೆ ಅಬ್ದುಲ್ ಕಲಾಂ, ಪ್ರಣವ್ ಮುಖರ್ಜಿ ಇವರಿಗೆ 4 ಬಾರಿ ಗೌರವ ಪ್ರಶಸ್ತಿಯನ್ನು ನೀಡಿದ್ದಾರೆ.
ಡಾ. ಅರವಿಂದ್ ಗೋಯಲ್ ಸುಮಾರು 25 ವರ್ಷಗಳ ಹಿಂದೆಯೇ ಆಸ್ತಿ ದಾನ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದು, ಕುಟುಂಬದವರು ಸಹಾಯ ಇದಕ್ಕೆ ಸಮ್ಮತಿ ನೀಡಿದ್ದಾರೆ. ಅವರ ಈ ನಿರ್ಧಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನು ಒದಿ : https://cnewstv.in/?p=10581
C News TV Kannada News Online in cnewstv