Cnewstv.in / 20.07.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಅ. 19 ರಂದು ರಾಜ್ಯಾದ್ಯಂತ ಓಮಿನಿ ಸಂಚಾರ.
ಆಗಸ್ಟ್ 19ರಂದು ಒಮಿನಿ ಚಿತ್ರ ತೆರೆ ಮೇಲೆ ಬರಲಿದ್ದು ಈಗಾಗಲೆ ಚಿತ್ರದ ಟ್ರೇಲರ್ ಸಖತ್ ಸದ್ದು ಮಾಡುತ್ತಿದೆ.
ಚಿತ್ರದ ಟ್ರೈಲರ್ ಅನ್ನು ಗೃಹಸಚಿವರ ಆರಗ ಜ್ಞಾನೇಂದ್ರ ಅವರು ಬಿಡುಗಡೆ ಮಾಡಿ ಸಂತೋಷವನ್ನು ವ್ಯಕ್ತಪಡಿಸಿದರು. ಮಲೆನಾಡಿನ ನಟ-ನಿರ್ದೇಶಕ ಮಂಜು ಹೆದ್ದೂರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಬೆಳ್ಳುಡಿ ಫಿಲಂಸ್ ಹಾಗೂ ಎಸ್ಆರ್ ಗ್ರೂಪ್ ಅವರ ಬ್ಯಾನರ್ ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ.
ನಟ ಸಿದ್ದು ಮೂಲಿಮನಿ ಮೊದಲ ಬಾರಿಗೆ ಈ ಚಿತ್ರದ ಮೂಲಕ ಹೀರೋ ಆಗಿ ನಟಿಸಿದ್ದಾರೆ. ಅಶ್ವಿನಿ ಚಂದ್ರಶೇಖರ್ ನಾಯಕನಟಿ ಆಗಿದ್ದು, ಮಲೆನಾಡಿನ ಸುಂದರ ಪ್ರದೇಶಗಳಲ್ಲಿ ಈ ಚಿತ್ರವನ್ನ ಚಿತ್ರೀಕರಣ ಮಾಡಲಾಗಿದೆ. ಅರ್ಜುನ್ ರಾಮು ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ.
ಇದೊಂದು ವಿಭಿನ್ನ ಕಥೆಯಾಗಿದ್ದು, ಸಸ್ಪೆನ್ಸ್, ಹಾರರ್, ಲವ್ ಎಲ್ಲ ಅಂಶಗಳು ಈ ಚಿತ್ರದಲ್ಲಿದೆ. ಓಮಿನಿ ಚಿತ್ರವನ್ನ ಜನರು ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಟ್ರೈಲರ್ ಮೂಡಿಸಿದೆ.
ಇದನ್ನು ಒದಿ : https://cnewstv.in/?p=10571
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.