Breaking News

ಆಗಸ್ಟ್ 10 ರಿಂದ ಮಂತ್ರಾಲಯದಲ್ಲಿ ರಾಯರ ಆರಾಧನೆ.. ಕಾರ್ಯಕ್ರಮದ ವಿವರ.‌

Cnewstv.in / 20.07.2022 / ರಾಯಚೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಆಗಸ್ಟ್ 10 ರಿಂದ ಮಂತ್ರಾಲಯದಲ್ಲಿ ರಾಯರ ಆರಾಧನೆ.

ರಾಯಚೂರು : ಆಗಸ್ಟ್ 10 ರಿಂದ 16 ರ ವರೆಗೆ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ನಿಮಿತ್ತ ಸಪ್ತರಥೋತ್ಸವ ಜರುಗಲಿದೆ.
ಶ್ರೀ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ‌

ಕಾರ್ಯಕ್ರಮದ ವಿವರ.‌..

ಅ.10 ರಂದು ಧ್ವಜಾರೋಹಣ ನೆರವೇರಿಸುವ ಮೂಲಕ ಆರಾಧನಾ ಮಹೋತ್ಸವಕ್ಕೆ ಶ್ರೀಗಳು ಚಾಲನೆ ನೀಡಲಿದ್ದಾರೆ.

ಅ.11 ರಜತ ಮಂಟಪೋತ್ಸವ ಜರುಗಲಿದೆ.

ಅ‌.12 ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಹಾಗೂ ರಜತ ಸಿಂಹವಾಹನೋತ್ಸವ.

ಅ.13 ಮಧ್ಯಾರಾಧನೆ, ಗಜ ರಜತ ಸ್ವಣ ರಥೋತ್ಸವ.

ಅ.14 ಉತ್ತರಾರಧನಾ ಮಹೋತ್ಸವ ನಿಮಿತ್ತ ಮಹಾರಥೋತ್ಸವ.

ಅ.15 ಶ್ರೀ ಸುಗುಣೇಂದ್ರ ತೀರ್ಥರ ಆರಾಧನೆ.

ಅ.16 ಸರ್ವ ಸಮರ್ಪಣೋತ್ಸವ ಕಾರ್ಯಕ್ರಮ.

ಏಳು ದಿನಗಳ ಕಾಲ ಪ್ರತಿದಿನ ಬೆಳಗ್ಗೆ 10 ಗಂಟೆಗೆ ಜ್ಞಾನ, ಯಜ್ಞ ಸಂಜೆ 5.30 ರಿಂದ 10 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಇದನ್ನು ಒದಿ : https://cnewstv.in/?p=10568

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*