Breaking News

ಹಂದಿ ಅಣ್ಣಿ ಹತ್ಯೆ ಆರೋಪಿಗಳನ್ನು ಶಿವಮೊಗ್ಗಕ್ಕೆ ಕರೆತಂದ ಪೊಲೀಸರು.

Cnewstv.in / 20.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಹಂದಿ ಅಣ್ಣಿ ಹತ್ಯೆ ಆರೋಪಿಗಳನ್ನು ಶಿವಮೊಗ್ಗಕ್ಕೆ ಕರೆತಂದ ಪೊಲೀಸರು.

ಶಿವಮೊಗ್ಗ : ರೌಡಿ ಶೀಟರ್ ಹಂದಿ ಅಣ್ಣಿಯನ್ನು ಹತ್ಯೆ ಮಾಡಿದ ಆರೋಪಿಗಳು ಚಿಕ್ಕಮಂಗಳೂರಿನಲ್ಲಿ ತಾವೇ ಹತ್ಯೆ ಮಾಡುವುದಾಗಿ ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದರು. ಚಿಕ್ಕಮಂಗಳೂರಿನಿಂದ ಎಂಟು ಜನ ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ರಾತ್ರಿ ಶಿವಮೊಗ್ಗಕ್ಕೆ ಕರೆತಂದು ಜಯನಗರ ಪೊಲೀಸರಿಗೆ ಒಪ್ಪಿಸಲಾಗಿದೆ.‌

ಅರೋಪಿಗಳನ್ನು ಚಿಕ್ಕಮಂಗಳೂರಿನಾ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನಂತರ ಶಿವಮೊಗ್ಗ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಇಂದು ಕೂಡ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ವಿಚಾರಣೆಗೆಂದು ಪೊಲೀಸ್ ವಶಕ್ಕೆ ಪಡೆಯುವ ಸಾಧ್ಯತೆ ಇದೆ.‌

ಈ ಸಂಬಂಧ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾದ್ ಆರೋಪಿಗಳ ಮೇಲೆ ಚಿಕ್ಕಮಗಳೂರಿನಲ್ಲಿ ಯಾವ ಪ್ರಕರಣವು ಇಲ್ಲದ ಕಾರಣ ನಮಗೆ ನೇರವಾಗಿ ಚಿಕ್ಕಮಂಗಳೂರು ನ್ಯಾಯಾಲಯ ಹಸ್ತಾಂತರಿಸಲು ಸೂಚಿಸಿದೆ. ಹಾಗಾಗಿ 8 ಜನರ ಬಂಧನವನ್ನು ಶಿವಮೊಗ್ಗದಲ್ಲಿಯೇ ಆಗಿದೆಯೆಂದು ತೋರಿಸಲಾಗುವುದು. ತನಿಖೆ ನಡೆಸಿ ಮತ್ತೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು ಎಂದರು.

ಎಂಟು ಜನ ಆರೋಪಿಗಳ ಪೈಕಿ ಒಬ್ಬ ಹಾವೇರಿ, ಮತ್ತೊಬ್ಬ ಹರಿಹರ ತಾಲೂಕಿನ ಗಡಿಭಾಗದ ನಿವಾಸಿ, ಒಬ್ಬ ಮಲವಗೊಪ್ಪದ ನಿವಾಸಿ ಉಳಿದಂತೆ ಎಲ್ಲರೂ ಕೂಡ ಶಿವಮೊಗ್ಗ ನಗರದ ನಿವಾಸಿಗಳು ಎಂದರು. ತನಿಖೆಯ ನಂತರ ಹಂದಿ ಅಣ್ಣಿ ಹತ್ಯೆಗೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳು ತಿಳಿಯಲಿದೆ ಎಂದರು.

ಇದನ್ನು ಒದಿ : https://cnewstv.in/?p=10562

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*