Cnewstv.in / 19.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹಂದಿ ಅಣ್ಣಿ ಹತ್ಯೆ ಆರೋಪಿಗಳ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದೇನು ??
ಶಿವಮೊಗ್ಗ : ರೌಡಿಶೀಟರ್ ಹಂದಿ ಅಣ್ಣಿಯನ್ನು ಹತ್ಯೆ ಮಾಡಿದ ಆರೋಪಿಗಳು ನಿನ್ನೆ ರಾತ್ರಿ ಚಿಕ್ಕಮಗಳೂರು ಪೊಲೀಸರಿಗೆ ಶರಣಾಗಿದ್ದಾರೆ.
ಇಂದು ಜಿಲ್ಲಾ ರಕ್ಷಣಾಧಿಕಾರಿಗಳಾದ ಲಕ್ಷ್ಮೀಪ್ರಸಾದ್ ರವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ನಿತಿನ್, ಕಾರ್ತಿಕ್, ಮಧು, ಫಾರೂಕ್, ಆಂಜನೇಯ, ಮಧು, ಮದನ್, ಚಂದನ್ ಎಂಬ ಎಂಟು ಜನರು ತಾವೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಅರೋಪಿಗಳನ್ನು ಚಿಕ್ಕಮಂಗಳೂರು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನಂತರ ನಮ್ಮ ಪೋಲಿಸರು ಅವರನ್ನು ಕಸ್ಟಡಿಗೆ ತೆಗೆದುಕೊಂಡು ತನಿಖೆ ಕೈಗೊಳ್ಳಲಿದ್ದಾರೆ. ವಿಚಾರಣೆಯ ವೇಳೆ ಎಲ್ಲಾ ಸಂಗತಿಗಳು ತಿಳಿಯಲಿದೆ ಎಂದರು.
ಆರೋಪಿಗಳಾದ ನಿತಿನ್ ಮತ್ತು ಕಾರ್ತಿಕ್ ಬಂಕ್ ಬಾಲುವಿನ ಹಿಂಬಾಲಕರಾಗಿದ್ದು, ಅವರ ವಿರುದ್ಧ ಪ್ರಕರಣಗಳಿವೆ. ಹಂದಿ ಅಣ್ಣಿ, ಬಂಕ್ ಬಾಲುವಿನ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದುಕೊಂಡು ಈ ಕೊಲೆ ಮಾಡಿರುವ ಸಾಧ್ಯತೆ ಇರಬಹುದು ಎಂದರು.
ನಮ್ಮ ನಾಲ್ಕು ತಂಡಗಳು ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ನಡೆಸುತ್ತಿದ್ದರು. ಮಡಿಕೇರಿ ಬೆಂಗಳೂರು,ಹೊನ್ನಾವರ ಸೇರಿದಂತೆ ಹಲವು ಕಡೆ ಕಾರ್ಯಾಚರಣೆ ನಡೆಸುತ್ತಿದ್ದರು. ಅಷ್ಟರಲ್ಲಿ ಆರೋಪಿಗಳು ತಾವಾಗಿಯೇ ಶರಣಾಗಿದ್ದಾರೆ.
ಆರೋಪಿ ಕಾರ್ತಿಕ ಕಳೆದ ನಾಲ್ಕು ತಿಂಗಳ ಹಿಂದೆಯೇ ವಾರೆಂಟ್ ಹೊರಡಿಸಲಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬೆಂಗಳೂರಿನಲ್ಲಿ ಹುಡುಕುತ್ತಿದ್ದರು. ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ ಏನೆಲ್ಲ ನಡೆಯಿತು. ಅನ್ನೋದರ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದರು.
ಇದನ್ನು ಒದಿ : https://cnewstv.in/?p=10558
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.