ಸಿಮ್ಸ್ : ವಿಧ್ಯಾರ್ಥಿನಿ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಮುಚ್ಚಿಹಾಕಲಾಗಿದ್ದು, ತಪ್ಪಿತಸ್ಥ ವೈದ್ಯರ ವಿರುದ್ಧ ಕಠಿಣ ಕ್ರಮಕ್ಕೆ ಅಗ್ರಹ.
Cnewstv.in / 19.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಿಮ್ಸ್ : ವಿಧ್ಯಾರ್ಥಿನಿ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಮುಚ್ಚಿಹಾಕಲಾಗಿದ್ದು, ತಪ್ಪಿತಸ್ಥ ವೈದ್ಯರ ವಿರುದ್ಧ ಕಠಿಣ ಕ್ರಮಕ್ಕೆ ಅಗ್ರಹ.
ಶಿವಮೊಗ್ಗ : ಸಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿಧ್ಯಾರ್ಥಿನಿಯೊಬ್ಬರ ಮೇಲೆ ಹಿರಿಯ ವೈದ್ಯರೊಬ್ಬರಿಂದ ನಡೆದಿರುವ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು
ಮುಚ್ಚಿಹಾಕಲಾಗಿದ್ದು ಈ ಕೂಡಲೆ ತನಿಖೆ ನಡೆಸಿ ತಪ್ಪಿತಸ್ಥ ವೈದ್ಯರ ವಿರುದ್ಧ ಕಠಿಣ ಕ್ರಮವನ್ನು ಕೈಗೊಂಡು ನೊಂದ ಮಹಿಳೆಗೆ ಸೂಕ್ತ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಪೀಪಲ್ಸ್ ಲಾಯರ್ ಗಿಲ್ಡ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಜುನ್ 15 ರಂದು ಸಿಮ್ಸ್ ವೈದ್ಯಕೀಯ ಕಾಲೇಜಿನ ವಿಧ್ಯಾರ್ಥಿನಿಯ ಮೇಲೆ ಹಿರಿಯ ಶಸ್ತ್ರ ಚಿಕಿತ್ಸೆ ವೈದ್ಯರಾದ ಶ್ರೀ ಅಶ್ವಿನ್ ಹೆಬ್ಬಾರ್ ಎಂಬುವರಿ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ
ಉತ್ತರಭಾರತೀಯ ವೈದ್ಯಕೀಯ ವಿದ್ಯಾರ್ಥಿನಿ ಸಿಮ್ ನಿರ್ದೇಶಕರಿಗೆ ಲಿಖಿತ ದೂರನ್ನು ನೀಡಿದ್ದು, ಸದರಿ
ದೂರನ್ನು ಗಂಬಿರವಾಗಿ ಪರಿಗಣಿಸದ ಡಾ.ಸಿದ್ದಪ್ಪ ಮತ್ತು ತನಿಖ ಸಂಸ್ಥೆಯ ಮುಖ್ಯಸ್ಥರಾದ ಡಾ.ರೇಖಾ ದೌರ್ಜನ್ಯಕೊಳಗಾದ ವಿದ್ಯಾರ್ಥಿನಿಯ ಮೇಲೆ ಒತ್ತಡ ಹೇರಿ ನೀಡಿರುವ ದೂರನ್ನು ಹಿಂಪಡೆಯುವಂತೆ ಮಾಡಿರುವುದು ಖಂಡನೀಯ.
ನೊಂದ ಮಹಿಳೆ ಉತ್ತರ ಭಾರತೀಯವರಾಗಿರುವುದರಿಂದ ಅವರಿಗೆ ಇಲ್ಲಿ ಯಾವುದೇ ಬೆಂಬಲ್ಲವಿಲ್ಲದೇ
ಅಸಹಾಯಕರಾಗಿರುವುದನ್ನು ದುರುಪಯೋಗ ಪಡಿಸಿಕೊಂಡು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ
ನಡೆಯುತ್ತಿದೆ. ವೈದ್ಯಕೀಯ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವೈದ್ಯ ಅಶ್ವಿನ್ ಹೆಬ್ಬಾರ್ ಇವರನ್ನು
ಕೂಡಲೇ ಅಮಾನತ್ತಿನಲ್ಲಿಟ್ಟು ಮತ್ತು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಡಾ.ಸಿದ್ದಪ್ಪ ಇವರನ್ನು ಕೂಡ
ಅಮಾನತ್ತಿನಲ್ಲಿರಿಸಿ ತಾವೇ ಖುದ್ದಾಗಿ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೋಲಿಸ್ ಇಲಾಖೆಗೆ ನಿದೇರ್ಶನ ನೀಡುವಂತೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಪೀಪಲ್ಸ್ ಲಾಯರ್ ಗಿಲ್ಡ್ ನ ಶ್ರೀಪಾಲ್, ವಿಜಯ ಕುಮಾರ್,ವಿಕಾಸ್, ಸ್ವರೂಪ್, ರಾಜ್ ಚರಣ್ ಮೊದಲಾದ ವಕೀಲರು ಉಪಸ್ಥಿತರಿದ್ದರು.
ಇದನ್ನು ಒದಿ : https://cnewstv.in/?p=10556
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ತಪ್ಪಿತಸ್ಥ ವೈದ್ಯರ ವಿರುದ್ಧ ಕಠಿಣ ಕ್ರಮಕ್ಕೆ ಅಗ್ರಹ. ಸಿಮ್ಸ್ : ವಿಧ್ಯಾರ್ಥಿನಿ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಪ್ರಕರಣವನ್ನು ಮುಚ್ಚಿಹಾಕಲಾಗಿದ್ದು 2022-07-19
Recent Comments