ನಗರದಲ್ಲಿ ಮತ್ತೊಂದು ಹತ್ಯೆಗೆ ಸಂಚು, ಇಬ್ಬರ ಬಂಧನ.
Cnewstv.in / 18.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಗರದಲ್ಲಿ ಮತ್ತೊಂದು ಹತ್ಯೆಗೆ ಸಂಚು, ಇಬ್ಬರ ಬಂಧನ.
ಶಿವಮೊಗ್ಗ : ನಗರದಲ್ಲಿ ಮತ್ತೊಬ್ಬ ರೌಡಿ ಶೀಟರ್ ಹತ್ಯೆಗೆ ಸಂಚು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅನಿಲ್ ಅಲಿಯಾಸ್ ಅಂಬು ಎಂಬ ರೌಡಿಶೀಟರ್ ನ ಹತ್ಯೆ ಮಾಡಲು ಸಂಚು ರೂಪಿಸಿದ್ದ ವಿಘ್ಙೇಶ್ ಹಾಗೂ ಚಂದನನನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.
ವಿಘ್ಙೇಶ್ ಹಾಗೂ ಚಂದನ್ ಬಂಕ್ ಬಾಲುವಿನ ಸಹಚರರಾಗಿದ್ದರು. ಈ ಹಿಂದೆ ಬಂಕ್ ಬಾಲುವನ್ನು ಅನಿಲ್ ಅಲಿಯಾಸ್ ಅಂಬುವಿನ ಸಹಚರರು ಕೊಲೆ ಮಾಡಿದ್ದರು. ಹಾಗಾಗಿ ಅವನನ್ನು ಹೇಗಾದರೂ ಮಾಡಿ ಹತ್ಯೆ ಮಾಡಬೇಕು ಎಂದು ಸಂಚು ಮಾಡಿ, ಸ್ನೇಹಿತನಾದ ಕಿರಣ ಕುಮಾರ್ ಅಲಿಯಾಸ್ ಕುಟ್ಟಿ ಎಂಬುವವನ ಮನೆಯಲ್ಲಿ ಇಟ್ಟಿದ್ದು, ಕಿರಣ್ ಕೂಡ ಹಣ ಮತ್ತು ವಾಹನ ವ್ಯವಸ್ಥೆ ಮಾಡುತ್ತೇನೆ ಎಂದು ತಿಳಿಸಿದ್ದಾನೆ.
ಅರೋಪಿಗಳಾದ ವಿಘ್ಙೇಶ್, ಚಂದನ್ ಹಾಗೂ ಕಿರಣ್ ನನ್ನು ಪೋಲಿಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ಇದನ್ನು ಒದಿ : https://cnewstv.in/?p=10544
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಇಬ್ಬರ ಬಂಧನ. ನಗರದಲ್ಲಿ ಮತ್ತೊಂದು ಹತ್ಯೆಗೆ ಸಂಚು 2022-07-18