ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ನಡೆದಿರುವ ಕಳಪೆ ಕಾಮಗಾರಿಗೆ ಭ್ರಷ್ಟಾಚಾರವೇ ಕಾರಣ – ಎಎಪಿ.
Cnewstv.in / 16.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ನಡೆದಿರುವ ಕಳಪೆ ಕಾಮಗಾರಿಗೆ ಭ್ರಷ್ಟಾಚಾರವೇ ಕಾರಣ – ಎಎಪಿ.
ಶಿವಮೊಗ್ಗ : ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ನಡೆದಿರುವ ಕಳಪೆ ಕಾಮಗಾರಿಗೆ ಭ್ರಷ್ಟಾಚಾರವೇ ಕಾರಣ, ಕೂಡಲೇ ಆ
ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಆಮ್ ಆದ್ಮ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದ್ದು ಇದಕ್ಕೆ ಕಾರಣ ಕಾಮಗಾರಿಯಲ್ಲಿ ನಡೆಯಲಾಗಿದೆ ಎನ್ನಲಾಗುತ್ತಿರುವ
ಭ್ರಷ್ಟಾಚಾರವಾಗಿದೆ. ಇದಕ್ಕೆ ಸಾಕ್ಷಿಯಾಗಿ ಕೇವಲ ಹದಿನೈದು ದಿನಗಳವರೆಗೆ ನಗರದಲ್ಲಿ ಮಳೆಯಾಗಿತ್ತು. ಈ ಮಳೆಗೆ
ನಗರದಲ್ಲಿ ನಡೆದಿರುವ ಬಹುತೇಕ ಕಾಮಗಾರಿ ಹಾಳಾಗಿದ್ದು, ರಸ್ತೆಗಳು ಕಿತ್ತು ಹೋಗಿದೆ. ಇಷ್ಟೇ ಅಲ್ಲದೆ ಬಹುತೇಕ ಕಡೆಗಳಲ್ಲಿ ಫುಟ್ ಪಾತ್ ಕೂಡ ಕಿತ್ತು ಹೋಗಿದೆ. ಇದಕ್ಕೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಸಾಕಷ್ಟು ಅವ್ಯವಹಾರ ಹಾಗೂ ಭ್ರಷ್ಟಾಚಾರ ನಡೆದಿರಬಹುದು.
ಜನರು ತೆರಿಗೆ ರೂಪದಲ್ಲಿ ಕಟ್ಟಿರುವ ಕೋಟ್ಯಂತರ ಹಣವನ್ನು ಅಧಿಕಾರಿಗಳು ಅನಗತ್ಯವಾಗಿ ದುರುಪಯೋಗವಾಗುವಂತೆ ಮಾಡಿದ್ದು, ಅಧಿಕಾರಿಗಳ ಈ ಕ್ರಮವನ್ನು ಖಂಡಿಸುವುದರ ಜತೆಗೆ ಇಂಥ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ಮನವಿ ಮಾಡಿದರು.
ಇದನ್ನು ಒದಿ : https://cnewstv.in/?p=10523
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ನಡೆದಿರುವ ಕಳಪೆ ಕಾಮಗಾರಿಗೆ ಭ್ರಷ್ಟಾಚಾರವೇ ಕಾರಣ - ಎಎಪಿ. 2022-07-16