ತುಂಬಿ ಹರಿಯುತ್ತಿರುವ ಭದ್ರಾ, ಮುಳುಗಿದ ಮಂಟಪ, ಹೊಸ ಸೇತುವೆ.
Cnewstv.in / 15.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ತುಂಬಿ ಹರಿಯುತ್ತಿರುವ ಭದ್ರಾ, ಮುಳುಗಿದ ಮಂಟಪ, ಹೊಸ ಸೇತುವೆ.
ಶಿವಮೊಗ್ಗ : ಭದ್ರಾ ಜಲಾಶಯದ ಒಳ ಹರಿವು ಹೆಚ್ಚಗಿದ್ದು, ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಗುರುವಾರ ಮಧ್ಯಾಹ್ನ 4 ಕ್ರಸ್ಟ್ ಗೇಟ್ ಗಳ ಮೂಲಕ ಭಾರಿ ಪ್ರಮಾಣದ ನೀರನ್ನು ಹೊರಬಿಡಲಾಯಿತು.
ನೆನ್ನೆ ಸಂಜೆ ಭದ್ರಾ ಜಲಾಶಯದಿಂದ 52 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಯಿತು. ರಾತ್ರಿ ಸಮಯಾಕ್ಕೆ ಭದ್ರಾನದಿ ತುಂಬಿದ ಹಿನ್ನಲೆಯಲ್ಲಿ ಭದ್ರಾವತಿಯ ಸಂಗಮೇಶ್ವರ ಮಂಟಪ ಮುಳುಗಡೆಯಾಗಿದ್ದು, ಹೊಸ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಬಂದ್ ಮಾಡಲಾಗಿದೆ.

ಇನ್ನೂ ತಗ್ಗು ಪ್ರದೇಶವಾದ ಕವಲಗುಂದಿ,ಗುಂಡುರಾವ್ ಶೆಡ್ ಪ್ರದೇಶದ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಹುತ್ತಾ ಕಾಲೋನಿಯ ಒಕ್ಕಲಿಗರ ಭವನ, ವಳ್ಳುವರ್ ಕಲ್ಯಾಣ ಮಂಟಪದಲ್ಲಿ ಕಾಳಜಿ ಕೇಂದ್ರವನ್ನು ಆರಂಭಿಸಲಾಗಿದ್ದು ಮುಳುಗಡೆಯ ಪ್ರದೇಶಕ್ಕೆ ಜಿಲ್ಲಾಧಿಕಾರಿಗಳಾದ ಡಾ. ಸೆಲ್ವಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಒದಿ : https://cnewstv.in/?p=10507
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ತುಂಬಿ ಹರಿಯುತ್ತಿರುವ ಭದ್ರಾ ಮುಳುಗಿದ ಮಂಟಪ. ಹೊಸ ಸೇತುವೆ. 2022-07-15