Breaking News

ಅಣ್ಣಪ್ಪ ಅಲಿಯಾಸ್ ಹಂದಿ ಅಣ್ಣಿ ಹತ್ಯೆ ಸುತ್ತ..

Cnewstv.in / 14.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಅಣ್ಣಪ್ಪ ಅಲಿಯಾಸ್ ಹಂದಿ ಅಣ್ಣಿ ಹತ್ಯೆ ಸುತ್ತ..

ಶಿವಮೊಗ್ಗ : ಇಂದು ಬೆಳಿಗ್ಗೆ ಶಿವಮೊಗ್ಗದಲ್ಲಿ ನೆತ್ತರು ಹರಿದಿದ್ದು, ಜನರು ಬೆಚ್ಚಿಬಿದ್ದಿದ್ದರು. ಕುಖ್ಯಾತ ರೌಡಿ ಹಂದಿ ಅಣ್ಣಿಯನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

ವಿನೋಬ ನಗರದಲ್ಲಿ 10.30 ರ ಸುಮಾರಿಗೆ ಹಂದಿ ಅಣ್ಣಿ ಮತ್ತು ಆತನ ಸ್ನೇಹಿತರು ಹೋಂಡಾ ಆಕ್ಟಿವಾ ಗಾಡಿಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಇನೋವಾ ಕಾರು ಡಿಕ್ಕಿ ಹೊಡೆದಿದೆ. ನಂತರ ಕಾರಿನಲ್ಲಿಂದ ನಾಲ್ಕರಿಂದ ಐದು ಜನರ ತಂಡ ಗುಂಪೊಂದು ಹಂದಿ ಅಣ್ಣಿಯನ್ನು ಅಟ್ಟಾಡಿಸಿಕೊಂಡು ಬಂದು ನೂರಾರು ಜನರ ಎದುರೇ
ಹತ್ಯೆ ಮಾಡಿದರು.

ಅಣ್ಣಪ್ಪ ಅಲಿಯಾಸ್ ಹಂದಿ ಅಣ್ಣಿ, ಲವಕುಶ ಹತ್ಯೆ ಪ್ರಕರಣದಲ್ಲಿ A1 ಅರೋಪಿಯಾಗಿದ್ದ ನಂತರ ಸಾಕಷ್ಟು ಪ್ರಕರಣಗಳಲ್ಲಿ ಈತನ ಹೆಸರು ಕೇಳಿಬರುತ್ತಿತ್ತು. ಹಂದಿ ಅಣ್ಣಿ ವಿರುದ್ಧ ಕೊಲೆ, ಹಫ್ತಾವಸೂಲಿ, ಡಕಾಯಿತಿ, ಬೆದರಿಕೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಒಟ್ಟು 9 ಪ್ರಕರಣಗಳಿವೆ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಯಾವುದೇ ಪ್ರಕರಣಗಳನ್ನು ಕಾಣಿಸಿಕೊಂಡಿರಲಿಲ್ಲ.‌

ಇತ್ತೀಚೆಗೆ ರಿಯಲ್ ಎಸ್ಟೇಟ್, ಮರಳು ಸಾಗಾಣಿಗೆ, ಲೇಔಟ್ ಗೆ ಸಂಬಂಧಿಸಿದಂತೆ ವ್ಯವಹಾರಗಳನ್ನು ನಡೆಸುತ್ತಿದ್ದ ಎನ್ನಲಾಗುತ್ತಿದೆ. ಆದರೆ ಈ ಹತ್ಯೆ ಯಾತಕ್ಕಾಗಿ ಆಯ್ತು ಅನ್ನೋದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಂದಿ ಅಣ್ಣಿ ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಯಾರು ನನ್ನನ್ನು ತುಳಿಯೋಕೆ ಆಗಲ್ಲ ಎಂದು ಅನ್ಯಭಾಷೆಯಲ್ಲಿ ಹಾಕಿಕೊಂಡಿದ್ದ ಕೆಲವೇ ನಿಮಿಷಗಳಲ್ಲಿ ಹ್ಯತ್ಯೆಯಾಗಿದ್ದು ಮಾತ್ರ ವಿಪರ್ಯಾಸವೇ ಸರಿ..

ಲವಕುಶನಾ ಅಣ್ಣ ಏನಾದರೂ ಹತ್ಯೆ ಮಾಡಿಸಿದನಾ ಅಥವಾ ಇತ್ತೀಚೆಗೆ ಆರಂಭಿಸಿದ ರಿಯಲ್ ಎಸ್ಟೇಟ್ ದಂಧೆಯಲ್ಲಿ ಸಹ ಸಾಕಷ್ಟು ಜೊತೆಯಲ್ಲಿ ದ್ವೇಷ ಕಟ್ಟಿಕೊಂಡಿದ್ದು ಅವರೇನಾದರೂ ಈ ಹತ್ಯೆ ಮಾಡಿಸಿದ್ದಾರಾ ಎಂಬ ವಿವಿಧ ಆಯಾಮಗಳಿಂದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು ಶೀಘ್ರವೇ ಪತ್ತೆ ಹಚ್ಚುವುದಾಗಿ ತಿಳಿಸಿದ್ದಾರೆ.

ಇದನ್ನು ಒದಿ : https://cnewstv.in/?p=10504

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*