Breaking News

ತಂದೆಯಿಂದಲೇ ಚಾಕು ಇರಿತಕ್ಕೆ ಒಳಗಾದ ಮಗ..

Cnewstv.in / 12.07.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ತಂದೆಯಿಂದಲೇ ಚಾಕು ಇರಿತಕ್ಕೆ ಒಳಗಾದ ಮಗ..

ಹುಬ್ಬಳ್ಳಿ : ಮಗನ ಅತಿಯಾದ ಕಿರುಕುಳದಿಂದ ಬೇಸತ್ತ
ತಂದೆಯೇ ಮಗನಿಗೆ ಚಾಕುವಿನಿಂದ ಇರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ತಂದೆ ಶಂಕರ್ ಸೂಗೂರು ಎಂಬುವನು ತನ್ನ ಮಗ ಜಗದೀಶ್ ಸೂಗೂರ ಗೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಹಳೆ ಹುಬ್ಬಳ್ಳಿಯ ಹೆಗ್ಗೇರಿ ಆಯುರ್ವೇದಿಕ್ ಕಾಲೇಜಿನ ಹತ್ತಿರ ಘಟನೆ ನಡೆದಿದೆ.

ಜಗದೀಶ್ ಮಾನಸಿಕ ಅಸ್ವಸ್ಥನಾಗಿದ್ದು, ತಂದೆ ಮತ್ತು ತಾಯಿಗೆ ಅವಾಚ್ಯಶಬ್ದಗಳಿಂದ ಯಾವಾಗಲೂ ಬಯ್ಯುತ್ತಾ ಸಿಕ್ಕಸಿಕ್ಕ ವಸ್ತುವಿನಿಂದ ಹೊಡೆಯುತ್ತಿದ್ದ, ಇಂದು ಬೆಳಿಗ್ಗೆ ಕೂಡ ಇದೇ ರೀತಿ ಮಾಡಿದಾಗ ಸಿಟ್ಟಿಗೆದ್ದ ತಂದೆ ಮಗನಿಗೆ ಚಾಕುವಿನಿಂದ ಇರಿದಿದ್ದಾನೆ.

ಶಂಕರ್ ಕ್ಷೌರಿಕ ಕೆಲಸ ಮಾಡುತ್ತಿದ್ದು, ಇಂದು ಬೆಳಗ್ಗೆ ತನ್ನ‌ ಮನೆಯಲ್ಲಿ ಇದ್ದ ಚಾಕುವಿನಿಂದ ಜಗದೀಶನ ಬೆನ್ನಿಗೆ ಚುಚ್ಚಿದ್ದಾನೆ, ಚಾಕುವಿನ ಹಿಡಿ ಮಾತ್ರ ಹೊರಗೆ ಬಂದಿದ್ದು ಚಾಕು ಅಲ್ಲೇ ಸಿಕ್ಕಿಹಾಕಿಕೊಂಡಿದೆ. ತಕ್ಷಣ ಜಗದೀಶ್ ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಗದೀಶ್ ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಒದಿ : https://cnewstv.in/?p=10458

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*