“ಹರೋಹರ” ಆಡಿಕೃತ್ತಿಕೆ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿ.
Cnewstv.in / 08.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹರೋಹರ ಆಡಿಕೃತ್ತಿಕೆ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿ.
ಶಿವಮೊಗ್ಗ : ಗುಡ್ಡೇಕಲ್ ನಲ್ಲಿರುವ ಬಾಲಾಸುಬ್ರಹ್ಮಣ್ಯ ಸ್ವಾಮಿಯ ಅಡಿಕೃತ್ತಿಕೆ ಹರೋಹರ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ.
ಸಂಪ್ರದಾಯದಂತೆ ವಿಜ್ರಂಭಣೆಯಿಂದ ಇದೇ ತಿಂಗಳು ಜುಲೈ 22 ಮತ್ತು 23 ರಂದು ಜಾತ್ರಾಮಹೋತ್ಸವ ನಡೆಯಲಿದೆ ಎಂದು ಬಾಲ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಎಂ. ರಾಜು ತಿಳಿಸಿದ್ದಾರೆ.
ಕಾವಡಿ ಹೊತ್ತು ತರುವ ಮೂಲಕ ಹರಕೆ ತೀರಿಸುವುದು ಇಲ್ಲಿನ ಪದ್ಧತಿ. ಆಷಾಡ ಅಥವಾ ಶ್ರಾವಣಮಾಸದಲ್ಲಿ ಕೃತಿಕೆ ದಿನದಂದು ಜಾತ್ರಾ ಉತ್ಸವ ಆಚರಿಸಲಾಗುತ್ತದೆ. ಮೊದಲನೆಯ ದಿನ ಭರಣಿ ಕಾವಡಿ, ಎರಡನೇ ದಿನ ಅಡಿ ಕೃತ್ತಿಕೆ ಎಂದು ಆಚರಿಸಲಾಗುತ್ತದೆ.
ಶಿವಮೊಗ್ಗ ಜಿಲ್ಲೆಯಿಂದ ಮಾತ್ರವಲ್ಲದೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಕೂಡ ಭಕ್ತರು ಆಗಮಿಸುತ್ತಿದ್ದು ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದರು
ಇದನ್ನು ಒದಿ : https://cnewstv.in/?p=10424
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹರೋಹರ ಆಡಿಕೃತ್ತಿಕೆ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿ. 2022-07-08