ಹಿಂದೆ ಸರ್ಕಾರ ತೆಗೆದ್ರು, ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ವಿಪಕ್ಷವಾಗಿ ಉಳಿಯಲ್ಲ – ಕೆ.ಎಸ್. ಈಶ್ವರಪ್ಪ.
Cnewstv.in / 07.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸಿದ್ದರಾಮೋತ್ಸವ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಎರಡು ಭಾಗವಾಗುತ್ತದೆ.
ಹಿಂದೆ ಸರ್ಕಾರ ತೆಗೆದ್ರು, ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ವಿಪಕ್ಷವಾಗಿ ಉಳಿಯಲ್ಲ – ಕೆ.ಎಸ್. ಈಶ್ವರಪ್ಪ.
ಶಿವಮೊಗ್ಗ : ಸಿದ್ದರಾಮಯ್ಯನವರ ಸಿದ್ದರಾಮೋತ್ಸವ ಆಚರಣೆಯನ್ನು ಕುರಿತು ಮಾತನಾಡಿದ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನವರು, ಸೋನಿಯಾಗಾಂಧಿಯವರು 75 ವರ್ಷದ ಕಾಂಗ್ರೆಸ್ ಸಮಾವೇಶ ಮಾಡಲು ಹೇಳಿದ್ದಾರೆ. ನಾನು ಆ ಕಡೆ ಗಮನ ಕೊಡುತ್ತೇನೆ ಅಂತ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಹಿರಂಗವಾಗಿ ನನಗೂ ಸಿದ್ದರಾಮಯ್ಯ ಅವರಿಗೂ ವೈಮನಸ್ಸು ಇದೆ ಅಂತ ಒಪ್ಪಿಕೊಳ್ಳದ ಡಿಕೆ ಶಿವಕುಮಾರ್ ಅವರು ನಾಚಿಗೇಡಿನ ಹೇಳಿಕೆಗಳನ್ನು ಕೊಡುತ್ತಿದ್ದಾರೆ.
ನಾನು ಸಿದ್ದರಾಮೋತ್ಸವ ವಿರೋಧ ಮಾಡ್ತೀನಿ ಅಂತ ಡಿಕೆ ಶಿವಕುಮಾರ್ ಅವರು ಧೈರ್ಯವಾಗಿ ಹೇಳಬಹುದಿತ್ತು ಅದನ್ನ ಬಿಟ್ಟು ಶಿಖಂಡಿ ರೂಪದಲ್ಲಿ ಹೇಳಿಕೆಯನ್ನು ನೀಡಿದ್ದಾರೆ. ಸಿದ್ದರಾಮೋತ್ಸವ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಎರಡು ಭಾಗವಾಗುತ್ತದೆ ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಹಿಂದೆ ಸರ್ಕಾರ ತೆಗೆದ್ರು, ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ವಿಪಕ್ಷವಾಗಿ ಉಳಿಯಲ್ಲ.
ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಗೆಲ್ತಾರೋ ಸೋಲ್ತಾರೋ ಗೊತ್ತಿಲ್ಲ. ಇನ್ನು ಸಿದ್ದರಾಮಯ್ಯನವರಿಗೆ ಕ್ಷೇತ್ರವೇ ಗೊತ್ತಿಲ್ಲ. ಆಗಲೇ ಮುಖ್ಯಮಂತ್ರಿ ಅಂತ ಹೇಳುತ್ತಾರೆ. ಜನ ಎಲ್ಲವನ್ನೂ ನೋಡುತ್ತಿದ್ದಾರೆ. ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಅವರನ್ನು ಸೋಲಿಸುತ್ತಾರೆ. ಹಿಂದೆ ಸರ್ಕಾರ ತೆಗೆದ್ರು, ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ವಿಪಕ್ಷವಾಗಿಯೋ ಉಳಿಯಲ್ಲ ಎಂದರು.
ಇದನ್ನು ಒದಿ : https://cnewstv.in/?p=10419
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ವಿಪಕ್ಷವಾಗಿ ಉಳಿಯಲ್ಲ - ಕೆ.ಎಸ್. ಈಶ್ವರಪ್ಪ. ಹಿಂದೆ ಸರ್ಕಾರ ತೆಗೆದ್ರು 2022-07-07