Breaking News

ಪಂಚಭೂತಗಳಲ್ಲಿ ಲೀನವಾದ ಚಂದ್ರಶೇಖರ್ ಗುರೂಜಿ.

Cnewstv.in / 06.07.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಪಂಚಭೂತಗಳಲ್ಲಿ ಲೀನವಾದ ಚಂದ್ರಶೇಖರ್ ಗುರೂಜಿ.

ಬೆಂಗಳೂರು : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯವರ ಅಂತ್ಯಕ್ರಿಯೆ ಇಂದು ಧಾರವಾಡ ಜಿಲ್ಲೆ ಸುಳ್ಳಾ ಗ್ರಾಮದಲ್ಲಿರುವ ಅವರ ಜಮೀನಿನಲ್ಲಿ ನೆರವೇರಿಸಲಾಯಿತು.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿತ್ತು ನಂತರ ಸುಳ್ಳಾ ಗ್ರಾಮದ ವರೆಗೆ ಮೆರವಣಿಗೆ ಮೂಲಕ ತರಲಾಯಿತು.

ವೀರಶೈವ ಲಿಂಗಾಯತ ಸಂಪ್ರದಾಯದಂತೆ ಕೋಟ್ರಯ್ಯ ಶ್ರೀಗಳು ಹಾಗೂ 10 ಸ್ವಾಮೀಜಿಗಳು ನೇತೃತ್ವದಲ್ಲಿ ಮಗಳು ಸ್ವಾತಿ ಹಾಗೂ ಅಣ್ಣನ ಮಗ ಸಂತೋಷ್ ಅಂತಿಮ ವಿಧಿವಿಧಾನವನ್ನು ನೆರವೇರಿಸಿದರು.

ಚಂದ್ರಶೇಖರ್ ಗುರೂಜಿ ಅವರ ಪತ್ನಿ ಅಂಕಿತ ಹಾಗೂ ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.ಪಂಚಾಕ್ಷರಿ ಮಹಾಮಂತ್ರದೊಂದಿಗೆ ಕ್ರಿಯಾವಿಧಿ ನೆರವೇರಿಸಲಾಯಿತು.

ಗುರುಜಿ ಅವರ ಅಂತಿಮ ದರ್ಶನವನ್ನು ಪಡೆಯಲು ಸಾವಿರಾರು ಮಂದಿ ಭಕ್ತರು ಆಗಮಿಸಿದ್ದರು. ಗುರೂಜಿಯವರ ಮುಂಬೈ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು ಕೂಡ ಆಗಮಿಸಿದ್ದರು.

ಅಂತ್ಯಕ್ರಿಯೆ ವೇಳೆ ಚಂದ್ರಶೇಖರ್ ಗುರೂಜಿ ಅವರು ಸಾಕಿದ್ದ ಪ್ರೀತಿಯ ನಾಯಿ ಪ್ರಿನ್ಸ್ ಮೂಕರೋಧನೆ ಪಟ್ಟಿದ್ದು ಎಲ್ಲರ ಗಮನ ಸೆಳೆಯಿತು.

ಇದನ್ನು ಒದಿ : https://cnewstv.in/?p=10401

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*