ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ : ಆರೋಪಿ ಮಹಂತೇಶ್ ಪತ್ನಿ ವನಜಾಕ್ಷಿ ಹೇಳಿದ್ದೇನು ??
Cnewstv.in / 06.07.2022 / ಬೆಂಗಳೂರು / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣ : ಆರೋಪಿ ಮಹಂತೇಶ್ ಪತ್ನಿ ವನಜಾಕ್ಷಿ ಹೇಳಿದ್ದೇನು ??
ಬೆಂಗಳೂರು : ನಿನ್ನೆ ಮಧ್ಯಾಹ್ನ ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ ಮಾಡಲಾಯಿತು.
ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ 60ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಆರೋಪಿಗಳು ಗುರುಜಿಯನ್ನು ಹತ್ಯೆ ಮಾಡಿದರು. ಘಟನೆ ನಡೆದ 4 ಗಂಟೆಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣ ಹಿನ್ನೆಲೆಯಲ್ಲಿ ಆರೋಪಿ ಗುರೂಜಿ ಆಪ್ತ ಮಹಾಂತೇಶ್ ಶಿರೋಳ್ ಪತ್ನಿ ವನಜಾಕ್ಷಿಯನ್ನು ಗೋಕುಲ್ ರೋಡ್ ಪೊಲೀಸರು ಬಂಧಿಸಿದ್ದಾರೆ.
ವನಜಾಕ್ಷಿ ಪೊಲೀಸರಿಗೆ ಹೇಳಿದ ಪ್ರಮುಖ ಮಾಹಿತಿಗಳು.
* ಗುರೂಜಿ ಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ.
* ನನಗೂ ಗುರೂಜಿಗೂ ಯಾವುದೇ ಹಣಕಾಸಿನ ವಿಚಾರದಲ್ಲಿ ಗಲಾಟೆ ಇಲ್ಲ.
* ಕೊಲೆ ಮಾಡಿದ್ದು ನನ್ನ ಪತಿ ಮಹಾಂತೇಶ್. ಕೊಲೆಗೆ ಕಾರಣ ಎನು ಅಂತ ಕೂಡ ನನಗೆ ಗೊತ್ತಿಲ್ಲ.
* ಹುಬ್ಬಳ್ಳಿಯಲ್ಲಿ ಯಾವ ಅಪಾರ್ಟ್ ಮೆಂಟ್ ಕೂಡಾ ನನ್ನ ಹೆಸರಿನಲ್ಲಿ ಇಲ್ಲ. ಒಂದಿಷ್ಟು ಸೈಟ್ ಇರುವುದು ನಿಜ. ಅದು ನನ್ನ ಪತಿಗೆ ಗೊತ್ತಿದೆ.
* 2005 ರಲ್ಲಿ ನಾನು ಸರಳ ಜೀವನ ಸಂಸ್ಥೆ ಸೇರಿಕೊಂಡಿದೆ. 2009ರಲ್ಲಿ ಮುಂಬೈಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ ನಾನು ಕೆಲಸದಿಂದ ಹೊರಬಂದೆ.
* ಗುರೂಜಿ ಹಾಗೂ ನಮ್ಮ ಕುಟುಂಬಕ್ಕೂ ಯಾವುದೇ ರೀತಿಯಾದಂತಹ ವ್ಯವಹಾರ ಇರಲಿಲ್ಲ ಆದರೆ ಬೇನಾಮಿ ಆಸ್ತಿ ವ್ಯವಹಾರ ಇರುವುದನ್ನು ನಿಜ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಗುರೂಜಿಯ ಬರ್ಬರ ಕೊಲೆ ಬೇನಾಮಿ ಆಸ್ತಿಗಾಗಿ ನಡೆಯಿತಾ ಎಂದು ಅನುಮಾನ ವ್ಯಕ್ತವಾಗಿದೆ. ಆರೋಪಿ ವನಜಾಕ್ಷಿ ಸರಳವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದು, 2019ರವರೆಗೆ ಸರಳ ವಾಸ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು. ಗುರೂಜಿ ವನಜಾಕ್ಷಿ ಹೆಸರಿಗೆ ಗೋಕುಲ ರಸ್ತೆ ಬಳಿಯ ಅಪಾರ್ಟ್‌ಮೆಂಟ್ ಮತ್ತು ಹಲವು ಆಸ್ತಿಗಳನ್ನು ನೋಂದಣಿ ಮಾಡಿಸಿದ್ದರು. ಬಳಿಕ ಆಸ್ತಿ ವಾಪಸ್ ಕೇಳಿದಾಗ ಗಲಾಟೆ ಆರಂಭವಾಗಿತ್ತು. ಆಸ್ತಿ ಜೊತೆಗೆ ಹಣಕಾಸಿನ ವಿಚಾರವಾಗಿಯೂ ಆಗಾಗ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಚಂದ್ರಶೇಖರ್ ಗುರೂಜಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಇದನ್ನು ಒದಿ : https://cnewstv.in/?p=10382
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಚಂದ್ರಶೇಖರ್ ಗುರೂಜಿ ಹತ್ಯೆ ಆರೋಪಿಗಳನ್ನು ಹೆಡೆಮುರಿಕಟ್ಟಿದ ಪೋಲಿಸರು. 2022-07-06