ಮೈದುಂಬಿ ಹರಿಯುತ್ತಿರುವ ತುಂಗಾ, ಮುಳುಗಿದ ಮಂಟಪ.
Cnewstv.in / 05.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಮೈದುಂಬಿ ಹರಿಯುತ್ತಿರುವ ತುಂಗಾ, ಮುಳುಗಿದ ಮಂಟಪ.
ಶಿವಮೊಗ್ಗ : ಕಳೆದ ಕೆಲವು ದಿನಗಳಿಂದ ತುಂಗಾ ನದಿಯ ಹಿನ್ನೀರಿನ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿಯ ಒಳಹರಿವು ಹೆಚ್ಚಾಗಿದೆ
ತುಂಗಾ ಜಲಾಶಯದಿಂದ 43,359 ಕ್ಯೂಸೆಕ್ ನೀರನ್ನು ನಿನ್ನೆ ರಾತ್ರಿ ಹೊರ ಬಿಡಲಾಗಿದೆ. ತುಂಗಾ ಜಲಾಶಯದ ಒಳಹರಿವು ಮತ್ತಷ್ಟು ಹೆಚ್ಚಾಗಿದೆ. ಒಳಹರಿವಿನ ಅಷ್ಟೇ ಪ್ರಮಾಣದ ನೀರನ್ನು ಹೊರಗೆ ಹರಿಸಲಾಗುತ್ತಿದೆ.
ಕಳೆದ ಎರಡು ಮೂರು ದಿನಗಳಿಂದ 9 ಗೇಟುಗಳ ಮೂಲಕ 18,000, 22900 ಕ್ಯೂ ಸೆಕ್ಸ್ ನೀರನ್ನ ಹರಿಸಲಾಗುತ್ತಿದ್ದು, ಅದರೆ ನೆನ್ನೆ ಒಳಹರಿವು ದುಪ್ಪಟ್ಟು ಹೆಚ್ಚಳದ ಹಿನ್ನಲೆಯಲ್ಲಿ ಗಾಜನೂರು ಜಲಾಶಯದಿಂದ 18 ಗೇಟ್ ಗಳ ಮೂಲಕ ನದಿಗೆ 43,359 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.
ಜಲಾಶಯದಿಂದ ನೀರನ್ನು ನದಿಗೆ ಬಿಟ್ಟಿರುವುದರಿಂದ ತುಂಗಾ ನದಿ ಮೈದುಂಬಿ ಹರಿಯುತ್ತಿದೆ. ಕೋರ್ಪಳಯ್ಯನ ಛತ್ರದ ಹಿಂದಿಯಲ್ಲಿರುವ ಮಂಟಪ ಮುಳುಗಡೆಯಾಗಿದೆ. ಈ ದೃಶ್ಯವನ್ನು ನೋಡಲು ಬೆಳಗ್ಗೆನಿಂದ ಅನೇಕ ಮಂದಿ ಮಂಟಪದ ಹತ್ತಿರದ ಬರುತ್ತಿದ್ದಾರೆ.
ಇದನ್ನು ಒದಿ : https://cnewstv.in/?p=10262
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಮುಳುಗಿದ ಮಂಟಪ. ಮೈದುಂಬಿ ಹರಿಯುತ್ತಿರುವ ತುಂಗಾ 2022-07-05