ರೈಲು ಡಿಕ್ಕಿಯಾಗಿ 40ಕ್ಕೂ ಹೆಚ್ಚು ಕುರಿಗಳ ಸಾವು.
Cnewstv.in / 04.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರೈಲು ಡಿಕ್ಕಿಯಾಗಿ 40ಕ್ಕೂ ಹೆಚ್ಚು ಕುರಿಗಳ ಸಾವು.
ಶಿವಮೊಗ್ಗ : ರೈಲು ಡಿಕ್ಕಿಯಾಗಿ 40ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ಇಂದು ಸಂಜೆ ನಡೆದಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನಲ್ಲಿ ಇಂದು ಸಂಜೆ ರೈಲ್ವೆ ಹಳಿ ದಾಟುತ್ತಿದ್ದ 40 ಕ್ಕೂ ಹೆಚ್ಚು ಕುರಿಗಳಿಗೆ ಮೈಸೂರು – ಶಿವಮೊಗ್ಗ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಸ್ಥಳದಲ್ಲಿ ಇದ್ದ 40 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದೆ. ಇನ್ನು ಅನೇಕ ಕುರಿಗಳು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿವೆ.
ಎಲ್ಲಾ ಕುರಿಗಳು ಹಾವೇರಿ ಜಿಲ್ಲೆಯ ಮೂಲದವರಿಗೆ ಸೇರಿದ್ದು ಎಂದು ಗುರುತಿಸಲಾಗಿದು. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನು ಒದಿ : https://cnewstv.in/?p=10360
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ರೈಲು ಡಿಕ್ಕಿಯಾಗಿ 40ಕ್ಕೂ ಹೆಚ್ಚು ಕುರಿಗಳ ಸಾವು. 2022-07-04