ಶಿವಮೊಗ್ಗ ನಗರದ ಕಸ ಸಂಗ್ರಹಣೆ ಸಮಸ್ಯೆಯನ್ನು ಕೂಡಲೇ ಪರಿಹರಿಸಿ – ಯಮುನಾ ರಂಗೇಗೌಡ.
Cnewstv.in / 04.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗ ನಗರದ ಕಸ ಸಂಗ್ರಹಣೆ ಸಮಸ್ಯೆಯನ್ನು ಕೂಡಲೇ ಪರಿಹರಿಸಿ – ಯಮುನಾ ರಂಗೇಗೌಡ.
ಶಿವಮೊಗ್ಗ : ನಗರದ ಕಸ ಸಂಗ್ರಹಣೆ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಮಹಾಪೌರರಿಗೆ ಒತ್ತಾಯಿಸಿದರು.
ನಗರದಲ್ಲಿ ಪೌರಕಾರ್ಮಿಕರು ತಮ್ಮ ಬೇಡಿಕೆ ಈಡೇರಿಸುವಂತ ಸರ್ಕಾರಕ್ಕೆ ಒತ್ತಾಯಿಸಿ 3 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಕಾರಣದಿಂದ ಶಿವಮೊಗ್ಗ ನಗರದಲ್ಲಿ ಮನೆಗಳಿಂದ ಕಸ ಸಂಗ್ರಹದ ಕಾರ್ಯ ಹಾಗೂ ಕಸ ವಿಲೆವಾರಿ ಕಾರ್ಯ ಸಂಪೂರ್ಣವಾಗಿ ಸ್ತಗಿತಗೊಂಡಿದ್ದು ಅನಾರೋಗ್ಯಕರ ವಾತಾವರನ ಉಂಟಾಗಿರುತ್ತದೆ. ಆದ
ಕಾರಣ ತಾವುಗಳು ಈ ಕೂಡಲೆ ಮೇಲ್ಕಂಡ ಪೌರಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತ ರಾಜ್ಯ ಸರ್ಕಾರಕ್ಕೆ ಒತ್ತಾಯಪಡಿಸುವುದರ ಜೊತೆಗೆ ತಾವುಗಳು ನಗರದ ಪೌರಕಾರ್ಮಿಕರ ಮುಷ್ಕರ ಹಿಂಪಡೆಯುವಂತ ಮನವಲಿಸಲು ಕೋರಿದೆ, ಅಲ್ಲದೆ ಪ್ರತಿಭಟನೆ ಮುಂದುವರದಲ್ಲಿ ನಗರದಲ್ಲಿ ಅನಾರೋಗ್ಯಕರ ವಾತಾವರಣ ಉಂಟಾಗುವ ಸಂರ್ದಭವಿರುವ ಕಾರಣ ಶಿವಮೊಗ್ಗ ನಗರದ ಕಸ ಸಂಗ್ರಹಣೆಯ ಸಮಸ್ಯೆಗೆ ಕೂಡಲೇ ಪರ್ಯಾಯ ಕ್ರಮಗಳನ್ನು ಕೈಗೊಂಡು ಕೂಡಲೇ ಸಮರ್ಪಕ ಕಸ ವಿಲೆವಾರಿ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲು ಒತ್ತಾಯಿಸಲಾಯಿತು.
ಇದನ್ನು ಒದಿ : https://cnewstv.in/?p=10347
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಶಿವಮೊಗ್ಗ ನಗರದ ಕಸ ಸಂಗ್ರಹಣೆ ಸಮಸ್ಯೆಯನ್ನು ಕೂಡಲೇ ಪರಿಹರಿಸಿ - ಯಮುನಾ ರಂಗೇಗೌಡ. 2022-07-04