Breaking News

ಲಕ್ಕಿನಕೊಪ್ಪ ಹತ್ತಿರ ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ.

Cnewstv.in / 01.07.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಲಕ್ಕಿನಕೊಪ್ಪ ಹತ್ತಿರ ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ.

ಶಿವಮೊಗ್ಗ : ಲಕ್ಕಿನಕೊಪ್ಪ ಹತ್ತಿರದ ತೋಟದಕೆರೆ ಕ್ರಾಸ್ ಬಳಿ ಖಾಸಗಿ ಬಸ್ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳ ನಡುವೆ ಭೀಕರ ಅಪಘಾತವಾಗಿದೆ.

ಶಿವಮೊಗ್ಗದಿಂದ ಹೊರನಾಡಿಗೆ ಹೋಗುತ್ತಿದ್ದ ಖಾಸಗಿ ಕೆಕೆಪಿ ಬಸ್ ಹಾಗೂ ಶೃಂಗೇರಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆ ಎಸ್ ಅರ್ ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಕೆಎಸ್ಅರ್ ಟಿಸಿ ಬಸ್ ಚಾಲಕನಾದ ಮಲ್ಲೇಶ್, ಮತ್ತು ಕೆಕೆಬಿ ಬಸ್ ಚಾಲಕನಾದ ಶ್ರೀಧರ್ ಭಟ್ ಸೇರಿದಂತೆ 40 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದೆ.

ಗಾಯಗೊಂಡ ಪ್ರಯಾಣಿ ಕರನ್ನು ಮೆಗ್ಗಾನ್ ಆಸ್ಪತ್ರೆಗೆ ಹಾಗೂ ಅಶೋಕ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ ಯಾವುದೇ ಪ್ರಾಣಾಪಾಯವಾಗಿಲ್ಲ. ಅಪಘಾತದಿಂದಾಗಿ ಎರಡು ಬಸ್ಸುಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಇದನ್ನು ಒದಿ : https://cnewstv.in/?p=10324

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*