ಸ್ವಚ್ಛತಾ ಅಭಿಯಾನ ಎಂಬುವುದು ಸೇವೆ ಎನ್ನುವುದಕ್ಕಿಂತಲೂ ನಮ್ಮ ಕರ್ತವ್ಯ – ಅವಧುತ ವಿನಯ್ ಗುರೂಜಿ
Cnewstv.in / 30.06.2022 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಸ್ವಚ್ಛತಾ ಅಭಿಯಾನ ಎಂಬುವುದು ಸೇವೆ ಎನ್ನುವುದಕ್ಕಿಂತಲೂ ನಮ್ಮ ಕರ್ತವ್ಯ – ಅವಧುತ ವಿನಯ್ ಗುರೂಜಿ
ಶಿವಮೊಗ್ಗ : ಇಂದು ಬೆಳ್ಳಂಬೆಳಗ್ಗೆ ಸಕ್ರೆಬೈಲ್ ರಸ್ತೆಯಲ್ಲಿ ಅವಧುತ ವಿನಯ್ ಗುರೂಜಿ ಹಾಗೂ ವಿವಿಧ ಸಂಘಸಂಸ್ಥೆಗಳ 350ಕ್ಕೂ ಹೆಚ್ಚು ಸ್ವಯಂಸೇವಕರು ಸ್ವಚ್ಛತಾ ಆಂದೋಲನ ನಡೆಸಿದರು.
ಸಕ್ರೆಬೈಲ್ ಆನೆ ಬಿಡಾರದಿಂದ ಮಂಡಗದ್ದೆ ಮಾರ್ಗವಾಗಿ 6 ಕಿಲೋಮೀಟರ್ ದೂರದ ಸ್ವಚ್ಛತಾ ಆಂದೋಲನವನ್ನು ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಆಯೋಜನೆ ಮಾಡಲಾಗಿತು. ಸ್ವಚ್ಛತಾ ಆಂದೋಲನ ಉದ್ಘಾಟಿಸಿ ಮಾತನಾಡಿದ ಅವಧುತ ವಿನಯ್ ಗುರೂಜಿ, ಸ್ವಚ್ಛತಾ ಅಭಿಯಾನ ಎಂಬುವುದು ಸೇವೆ ಎನ್ನುವುದಕ್ಕಿಂತಲೂ ನಮ್ಮ ಕರ್ತವ್ಯ ಎಂದರು.
ನಾವೆಲ್ಲರೂ ಭಾರತೀಯರಾಗಿ ನಮ್ಮ ಪ್ರಾಯಶ್ಚಿತ್ತ ಕರ್ಮವನ್ನು ಮಾಡುತ್ತಿದ್ದೇವೆ. ನಮಗೆ ಏನಾದ್ರು ಆದರೆ ಹೇಳುತ್ತವೆ ಆದರೆ ಪ್ರಾಣಿಗಳಿಗೆ ಏನಾದರೂ ಆದರೆ ಹೇಳುವ ಅವಕಾಶವಿಲ್ಲ. ಮುಂದಿನ ನಮ್ಮ ಪೀಳಿಗೆಗೆ ಮರಗಳನ್ನು, ಶುದ್ಧ ಗಾಳಿಯನ್ನು ನೀಡುವುದರ ಬದಲಾಗಿ ಹಳೆ ಪ್ಲಾಸ್ಟಿಕ್, ಬಾಟಲಿಗಳನ್ನು ನೀಡುವ ಮನೋವೃತ್ತಿಯನ್ನು ಕಡಿಮೆ ಮಾಡೋಣ ಎಂದರು.
ಕಾರ್ಯಕ್ರಮದ ಸಹಭಾಗಿತ್ವವನ್ನು ಸರ್ಜಿ ಫೌಂಡೇಶನ್, ಗೌರಿಗದ್ದೆಯ ಮಹಾತ್ಮಾಗಾಂಧಿ ಟ್ರಸ್ಟ್, ಓಪನ್ ಮೈಂಡ್ಸ್ ಸ್ಕೂಲ್ ಜಾವಳ್ಳಿ, ಪರೋಪಕಾರಂ, JCI ಶಿವಮೊಗ್ಗ ಮಲ್ನಾಡ್, ರೌಂಡ್ ಟೇಬಲ್ ಇಂಡಿಯಾ 166, ಆಶ್ರಯ ಬಡಾವಣೆ ಹಿತರಕ್ಷಣಾ ವೇದಿಕೆ ಸೇರಿದಂತೆ ಅನೇಕ ಸ್ವಯಂ ಸೇವಕರು ವಹಿಸಿದ್ದರು.
Recent Comments