Breaking News

80 ರ ಹರೆಯದಲ್ಲಿ ಒಂದಾದ ಜೋಡಿ.. ಈ ಜೋಡಿಯ ಇಂಟರೆಸ್ಟಿಂಗ್ ಸ್ಟೋರಿ ನೋಡಿ…

Cnewstv.in / 29.06.2022 / ಬೆಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

80 ರ ಹರೆಯದಲ್ಲಿ ಒಂದಾದ ಜೋಡಿ.. ಈ ಜೋಡಿಯ ಇಂಟರೆಸ್ಟಿಂಗ್ ಸ್ಟೋರಿ ನೋಡಿ…

ಬೆಂಗಳೂರು : ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋ ಮಾತಿದೆ. ಆದರೆ ಇಲ್ಲಿ ಮದುವೆಯಾಗಿ 53 ವರ್ಷದಿಂದ ಬೇರೆಯಾಗಿ ಬದುಕಿದ ಜೋಡಿಗಳು 80ನೇ ವಯಸ್ಸಿನಲ್ಲಿ ಒಂದಾಗುವ ಸಮಯ ನಡೆದಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುನ್ನೂರು ಗ್ರಾಮದ 85 ವರ್ಷದ ಬಸಪ್ಪ ಹಾಗೂ 80 ವರ್ಷದ ಕಲ್ಲವ್ವ ಎಂಬುವರಿಗೆ 60 ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ ಮದುವೆಯಾದ 6 ತಿಂಗಳಲ್ಲಿ ಇವರಿಬ್ಬರು ಬೇರೆಯಾಗಿದ್ದರು.

ಬಸಪ್ಪ ಬೇರೆ ಮದುವೆಯಾಗಿ ನಾಲ್ಕು ಮಕ್ಕಳ ತಂದೆಯಾಗಿದ್ದರು. ಆದರೆ ಕಲ್ಲವ್ವ ಪತಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ತನಗೆ ಜೀವನಾಂಶ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಹಲವಾರು ವರ್ಷಗಳಿಂದ ನ್ಯಾಯಾಲಯದಲ್ಲಿ ನಡೆಯುತ್ತಿತ್ತು.

ಲೋಕ್ ಅದಾಲತ್ ನಲ್ಲಿ ಕರೆಸಿ ಈ ಪ್ರಕರಣವನ್ನು ಇತ್ಯರ್ಥ ಮಾಡಲಾಗಿದೆ. ಕೋಟ್ ಇದೀಗ ಅವರಿಬ್ಬರನ್ನು ಒಂದು ಮಾಡಿದೆ. ಇದಕ್ಕೆ ಅವರಿಬ್ಬರ ಮಕ್ಕಳು ಸಹ ಒಪ್ಪಿಗೆ ನೀಡಿದ್ದಾರೆ.

ಒಟ್ಟಿನಲ್ಲಿ 53 ವರ್ಷಗಳ ಹಿಂದೆ ಬೇರೆಯಾಗಿದ್ದ ಜೋಡಿಗಳು ಇದೀಗ 80ರ ವಯಸ್ಸಿನಲ್ಲಿ ಒಂದಾಗಿ ಮನೆಯತ್ತ ಹೆಜ್ಜೆ ಹಾಕಿದೆ.

ಇದನ್ನು ಒದಿ : https://cnewstv.in/?p=10297

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*