ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳ್ಳರ ಬಂಧನ. 8,20,000 ರೂ ಮೌಲ್ಯದ ಆರು ದ್ವಿಚ್ರವಾಹನಗಳ ವಶ..
Cnewstv.in / 28.06.2022 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳ್ಳರ ಬಂಧನ. 8,20,000 ರೂ ಮೌಲ್ಯದ ಆರು ದ್ವಿಚ್ರವಾಹನಗಳ ವಶ..
ಶಿವಮೊಗ್ಗ : ಅಂತರ್ ಜಿಲ್ಲಾ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ಸುಮಾರು 08,20,000/ರೂ ಮೌಲ್ಯದ ವಿವಿಧ ಮಾದರಿಯ
ಕಳ್ಳತನವಾದ ಒಟ್ಟು 06 ದ್ವಿಚಕ್ರ ವಾಹನಗಳ ಜಪ್ತಿ ಮಾಡಲಾಗಿದೆ.
ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚಿಗೆ ಬೈಕ್ ಕಳ್ಳತನ ಪ್ರಕರಣ ವರದಿಯಾಗಿದ್ದರಿಂದ ಮಾನ್ಯ ಲಕ್ಷ್ಮೀ ಪ್ರಸಾದ್ ಐಪಿಎಸ್ ಮಾನ್ಯ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಶಿವಮೊಗ್ಗ ಜಿಲ್ಲೆಯ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ವಿಕ್ರಮ್, ಅಮತೆ, ರವರು ಬೈಕ್ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಲು ಆದೇಶಿಸಿದ್ದರು. ಇವರ ಆದೇಶದ ಮೇರೆಗೆ ಶ್ರೀ.ರೋಹನ್ ಜಗದೀಶ್ ಐಪಿಎಸ್ ಮಾನ್ಯ ಸಹಾಯಕ ಪೊಲೀಸ್ ಅಧೀಕ್ಷಕರು ಸಾಗರ ಉಪ ವಿಭಾಗ ಸಾಗರ ಮತ್ತು ಕಾರ್ಗಲ್ ಸರ್ಕಲ್ ಪೊಲೀಸ್ ಇನ್ಸಪೇಕ್ಟರ್, (ಪ್ರಭಾರ) ಸಾಗರ ಟೌನ್ ಪೊಲೀಸ್ ಠಾಣೆ ಶ್ರೀ ಕೃಷ್ಣಪ್ಪ ಕೆ.ವಿ. ರವರ ಮಾರ್ಗದರ್ಶನದಲ್ಲಿ ಒಂದು ವಿಶೇಷ ತಂಡ ರಚಿಸಿ ಕಾರ್ಗಲ್ ಪೊಲೀಸ್ ಠಾಣೆಯ PSI ತಿರುಮಲೇಶ್.ಜಿ, ಮತ್ತು ಸಾಗರ ಟೌನ್ ಪೊಲೀಸ್ ಠಾಣೆಯ PSI ಟಿ.ಡಿ.ಸಾಗರ್ ಕರ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಬೆಳಗಿನ ಜಾವ ಸಾಗರ ಪಟ್ಟಣದಲ್ಲಿ ಆರೋಪಿತರಾದ ಸಮೀ @ ಸೈಕ್ ಪ್ಯಾಟ್ರನ್ 23 ಟ್ಯಾಂಕ್ ಮೊಹಲ್ಲ, ಶಿವಮೊಗ್ಗ, ಮಹ್ಮದ್ ಖಾದ್ರಿ. ಶಿವಮೊಗ್ಗ ಜುನೈದ್ ಖಾನ್ ಟ್ಯಾಂಕ್ ಮೊಹಲ್ಲಾ, ಶಿವಮೊಗ್ಗ ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪಿತರು. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣ, ಭದಾವತಿ, ಹರಿಹರ, ದಾವಣಗೆರೆ, ಹಾಸನ ಜಿಲ್ಲೆ ಗಳಲ್ಲಿ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಗಳನ್ನು ಕಳ್ಳತನ ಮಾಡಿದ್ದಾಗಿ ಹೇಳಿಕೆ ನೀಡಿದ್ದರಿಂದ ಆರೋಪಿತರನ್ನು ದಸ್ತಗಿರಿ ಮಾಡಿ ಸುಮಾರು 8.20,000/ರೂ ಮೌಲ್ಯದ ವಿವಿಧ ಕಂಪನಿಯ 06 ಬೈಕ್‌ಗಳನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ
ಕಾರ್ಯಾಚರಣೆಯಲ್ಲಿ ಸಾಗರ ಟೌನ್ ಪೊಲೀಸ್ ಠಾಣೆಯ ಕ್ರೈಮ್ ಸಿಬ್ಬಂಧಿಗಳಾದ ಹೆಚ್.ಸಿ. ರತ್ನಾಕರ್, CPC ಗಳಾದ ಸಂತೋಷ್ ನಾಯ್ಕ, ಶ್ರೀಧರ್, ಯೋಗಿಶ್, ಲೋಕೇಶ್, ಮೈಲಾರಿ, ಭರತ್ ಕುಮಾರ್, ವಿಶ್ವನಾಥ್, ಮಂಜುನಾಥ್ ಹಾಗೂ ಇನ್ನಿತರ ಸಿಬ್ಬಂದಿಗಳು ಇದ್ದರು. ಬೈಕ್ ಕಳ್ಳತನದ ಜಾಡು ಹಿಡಿದು ಮಿಂಚಿನ ಕಾರ್ಯಾಚರಣೆ ನಡೆಸಿ ಬೈಕ್ ಖದಿಮರನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರರವರು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನು ಒದಿ : https://cnewstv.in/?p=10290
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
000 ರೂ ಮೌಲ್ಯದ ಆರು ದ್ವಿಚ್ರವಾಹನಗಳ ವಶ.. 20 ಅಂತರ್ ಜಿಲ್ಲಾ ದ್ವಿಚಕ್ರ ವಾಹನ ಕಳ್ಳರ ಬಂಧನ. 8 2022-06-28
Recent Comments