Breaking News

4 ತಿಂಗಳು ಶಿರಾಡಿ ಘಾಟಿ ಬಂದ್‌ ಬೇಡಿಕೆ..

Cnewstv.in / 27.06.2022 / ಮಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

4 ತಿಂಗಳು ಶಿರಾಡಿ ಘಾಟಿ ಬಂದ್‌ ಬೇಡಿಕೆ..

ಮಂಗಳೂರು : ಬೆಂಗಳೂರು ಸಂಪರ್ಕಿಸುವ ರಾ. ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ ರಸ್ತೆ ದುರಸ್ತಿ ಕಾಮಗಾರಿಗೆ 4 ತಿಂಗಳು ಸಂಚಾರ ಬಂದ್‌ ಮಾಡುವಂತೆ ಕಾಮಗಾರಿ ಟೆಂಡರ್‌ ವಹಿಸಿರುವ ಸಂಸ್ಥೆಯು ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಬೇಡಿಕೆ ಮಂಡಿಸಿದೆ.

ಮಾರನಹಳ್ಳಿ- ಸಕಲೇಶಪುರ ರಸ್ತೆ ತಿರುವುಗಳನ್ನು ಹೊಂದಿದ್ದು, ದುರಸ್ತಿಗೆ ರಸ್ತೆ ಬಂದ್‌ ಮಾಡುವುದು ತೀರಾ ಅಗತ್ಯ ಎಂದು ಗುತ್ತಿಗೆದಾರರರು ಪ್ರತಿಪಾದಿಸಿದ್ದಾರೆ. ಸದ್ಯಕ್ಕೆ ರಸ್ತೆಯನ್ನು ಮುಚ್ಚುವ ಚಿಂತನೆ ಇಲ್ಲ. ಅಧಿಕಾರಿಗಳು, ತಂತ್ರಜ್ಞರ ಜತೆ ಜಂಟಿ ಸರ್ವೇ ನಡೆಸಿ ಯಾವ ರೀತಿಯಲ್ಲಿ ರಸ್ತೆಯನ್ನು ದುರಸ್ತಿ ಮಾಡಬಹುದು ಎಂಬ ಬಗ್ಗೆ ಶೀಘ್ರ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಇದನ್ನು ಒದಿ : https://cnewstv.in/?p=10267

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*