Breaking News

ಗಾಂಧಿ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ, ವೋಟಿ ರವಿಗಿಲ್ಲ: ಬಿ.ವಿ.ಶ್ರೀನಿವಾಸ.

Cnewstv.in / 24.06.2022 / ಬೆಂಗಳೂರು /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಗಾಂಧಿ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ, ವೋಟಿ ರವಿಗಿಲ್ಲ: ಬಿ.ವಿ.ಶ್ರೀನಿವಾಸ.

ಬೆಂಗಳೂರು: ಗಾಂಧಿ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ವೋಟಿ ರವಿಗೆ ಇಲ್ಲ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ ಸಿ ಟಿ ರವಿ ವಿರುದ್ಧ ಗುಡುಗಿದ್ದಾರೆ.

ಅಗ್ನಿಪಥ್ ಯೋಜನೆ ವಿರೋಧಿಸಿ ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ಆಕ್ರೋಶ್ ರಾಲಿಯಲ್ಲಿ ಮಾತನಾಡಿದರು. ಸಿ.ಟಿ ರವಿ ಆ್ಯಕ್ಸಿಡೆಂಟ್ ಗಿರಾಕಿ. ಈಗಾಗಲೇ ಎರಡ್ಮೂರು ಆ್ಯಕಿಡೆಂಟ್ ಮಾಡಿ ಜನರ ಜೀವ ತೆಗೆದಿದ್ದಾರೆ. ಅಂತಹವರಿಂದ ನಮಗೆ ನೀತಿಪಾಠ ಬೇಡ ಎಂದರು.

ಅಗ್ನಿಪಥ್ ಹೆಸರಿಗೆ ಮಸಿಬಳಿಯುವ ಕೆಲಸ ಬಿಜೆಪಿ ಮಾಡಿದೆ. ಭಾರತೀಯ ಸೇನೆಯನ್ನು ಖಾಸಗಿ ಪಾಲು ಮಾಡುವ ಹುನ್ನಾರ ನಡೆಸಿದ್ದಾರೆ. ದೇಶದ ಆಸ್ತಿಗಳನ್ನೇ ಮೋದಿ, ಅಮಿತ್ ಷಾ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

ಇದನ್ನು ಒದಿ : https://cnewstv.in/?p=10249

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*