ನಕಲಿ ದಾಖಲೆ ಸೃಷ್ಟಿ ಮಾಡಿ ಭೂ ಮಾಫಿಯಾ ನಡೆಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಿ – ನವಕರ್ನಾಟಕ ನಿರ್ಮಾಣ ವೇದಿಕೆ
Cnewstv.in / 17.06.2022 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಕಲಿ ದಾಖಲೆ ಸೃಷ್ಟಿ ಮಾಡಿ ಭೂ ಮಾಫಿಯಾ
ನಡೆಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಿ – ನವಕರ್ನಾಟಕ ನಿರ್ಮಾಣ ವೇದಿಕೆ
ಶಿವಮೊಗ್ಗ : ನಕಲಿ ದಾಖಲೆ ಸೃಷ್ಟಿ ಮಾಡಿ ಭೂ ಮಾಫಿಯಾ
ನಡೆಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಿ
ನವಕರ್ನಾಟಕ ನಿರ್ಮಾಣ ವೇದಿಕೆ ಹಾಗೂ ರೆವಿನ್ಯೂ ನಿವೇಶನದಾರರ ಹಿತರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಮಹಾನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ನಕಲಿ ಹಕ್ಕುಪತ್ರ ಸೃಷ್ಟಿ ಮಾಡಿ ಹಣ ಮಾಡುವ ದಂಧೆ ಹೆಗ್ಗಿಲ್ಲದೆ ಸಾಗಿದ್ದು, ಈ ಹಿಂದೆ ನಕಲಿ ಹಕ್ಕುಪತ್ರ ಪ್ರಕರಣ ಬಯಲಿಗೆ ಬಂದಾಗ ನಕಲಿ ಹಕ್ಕುಪತ್ರ ಸೃಷ್ಟಿ ಕರ್ತರಿಗೆ ಈ ದಂಧೆಯಲ್ಲಿ ತೊಡಗಿದವರಿಗೆ ಕೆಲ ರಾಜಕಾರಣಿಗಳ ಕೃಪೆಯಿಂದ ದೊಡ್ಡಮಟ್ಟದ ತನಿಖೆಯಾಗಲೀ, ಶಿಕ್ಷೆಯಾಗಲೀ ಆಗದೇ ಇರುವುದರಿಂದ ಈ ಬಡಾವಣೆಗಳಲ್ಲಿ ನಕಲಿ ಹಕ್ಕುಪತ್ರ ಸೃಷ್ಟಿಸುವ ಜಾಲ ಮತ್ತೇ ತನ್ನ ಕಾರ್ಯ ಪ್ರಾರಂಭ ಮಾಡಿದೆ.
ಈ ಹಿಂದೆ ರೆವಿನ್ಯೂ ನಿವೇಶನಗಳ ತುಂಡು ಭೂಮಿ ನೊಂದಣಿಗೆ ಅವಕಾಶವಿದ್ದ ಸಮಯದಲ್ಲಿ ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಸೇರಿದಂತೆ ಅನೇಕ ಕಡೆಗಳಲ್ಲಿ ರೈತರು ತಮ್ಮ ಕೃಷಿ ಭೂಮಿಯನ್ನು 20+30, 3040 ಹೀಗೆ ಹಲವಾರು ವಿಸ್ತೀರ್ಣಗಳಲ್ಲಿ ವಿಂಗಡಿಸಿ ಮಾರಾಟ ಮಾಡಿದ್ದು, ತುಂಡು ಭೂಮಿ ನೊಂದಣಿಗೆ ಕಾನೂನು ರೀತಿಯಲ್ಲಿ ಅವಕಾಶ ಇದ್ದುದ್ದರಿಂದ ಅನೇಕ ಬಡಮಾಧ್ಯಮ ವರ್ಗದ ಜನ ಇಂತಹ ನಿವೇಶನಗಳನ್ನು ಖರೀದಿ ಮಾಡಿ ಕ್ರಯದ ಕರಾರು, ಕ್ರಯ ಪತ್ರವನ್ನು ನೊಂದಣಿ ಮಾಡಿಸಿಕೊಂಡು ತಮ್ಮ ಹೆಸರಿಗೆ ರೆವಿನ್ಯೂ ಪಹಣಿಯನ್ನು ಸಹ ಮಾಡಿಸಿ ಕೊಂಡಿದ್ದಾರೆ.
ಬೊಮ್ಮನಕಟ್ಟೆ ಆಶ್ರಯ ನಿವೇಶನಕ್ಕೆ ಹೊಂದಿಕೊಂಡಿರುವ
ಬೊಮ್ಮನಕಟ್ಟೆ ಸರ್ವೇ ನಂ:-103 ರಲ್ಲಿ ಸಹ ರೆವಿನ್ಯೂ ನಿವೇಶನಗಳ ನೊಂದಣಿಯಾಗಿದ್ದು, ಆ ಸಮಯದಲ್ಲಿ
ಮನೆಕಟ್ಟಲು ಹಣವಿಲ್ಲದ ಕೆಲಬಡವರು ನಿವೇಶನ ಖರೀದಿ ಮಾಡಿ ಹಾಗೇಯೆ ಖಾಲಿ ಬಿಟ್ಟಿದ್ದು ಈ ವಿಚಾರವನ್ನು
ಅರಿತಿರುವ ಭೂ ಮಾಫಿಯಾ ತಂಡದವರು ನಕಲಿ ಹಕ್ಕುಪತ್ರವನ್ನು ಸೃಷ್ಟಿ ಮಾಡಿ ರೆವಿನ್ಯೂ ನಿವೇಶನದಾರರ
ಸೈಟಿನಲ್ಲಿ ತಮಗೆ ಕೆಲ ಅಧಿಕಾರಿಗಳನ್ನು ಬಳಸಿಕೊಂಡು ಬಡವರ ಮೇಲೆ ದಬ್ಬಾಳಿಕೆ ನಡೆಸಿ, ಕಟ್ಟಡ ಕಟ್ಟುವ ಕೆಲಸಕ್ಕೆ
ಮುಂದಾಗಿದ್ದಾರೆ.
ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ನಕಲಿ ಹಕ್ಕುಪತ್ರ ಹೊಂದಿದ್ದ ಸರೋಜಮ್ಮ ಕೋಂ ಲಕ್ಷಯ್ಯ ಹೆಸರಿನ ಹಕ್ಕುಪತ್ರವನ್ನು ವಿನೋಬನಗರ ಪೊಲೀಸರಿಗೆ ನೀಡಿದ್ದು, ನಂತರ ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಅಧಿಕೃತವಾಗಿ ಮಾಹಿತಿ ಪಡೆದಾಗ ನಕಲಿ ಹಕ್ಕುಪತ್ರ ಸೃಷ್ಟಿಯಾಗಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ತಾವುಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆ
ಆಯುಕ್ತರಿಗೆ ಕೂಡಲೇ ಈ ರೀತಿ ನಕಲಿ ಹಕ್ಕುಪತ್ರ ಪಡೆದವರನ್ನ ಹಾಗೂ ಸೃಷ್ಟಿ ಮಾಡಿದವರನ್ನು ಬಂಧಿಸಿ ಸೂಕ್ತ
ಕಾನೂನು ಕ್ರಮ ಕೈಗೊಂಡು ನಿಜವಾದ ಹಕ್ಕುದಾರರನ್ನ ರಕ್ಷಿಸಬೇಕೆಂದು ಆಗ್ರಹಿಸಿದರು.
ಇದನ್ನು ಒದಿ : https://cnewstv.in/?p=10170
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಕಲಿ ದಾಖಲೆ ಸೃಷ್ಟಿ ಮಾಡಿ ಭೂ ಮಾಫಿಯಾ ನಡೆಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಿ - ನವಕರ್ನಾಟಕ ನಿರ್ಮಾಣ ವೇದಿಕೆ 2022-06-17
Recent Comments