Breaking News

ಬಾವಿಗೆ ಬಿದ್ದ ಹೋರಿಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು.

Cnewstv.in / 17.06.2022 / ಶಿವಮೊಗ್ಗ /ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಬಾವಿಗೆ ಬಿದ್ದ ಹೋರಿಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು.

ಚಂದ್ರಗುತ್ತಿ : ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ಹೋರಿಯನ್ನು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ರಕ್ಷಿಸುವ ಘಟನೆ ಚಂದ್ರಗುತ್ತಿ ಸಮೀಪದ ಚನ್ನಪಟ್ಟಣ ಗ್ರಾಮದಲ್ಲಿ ಗುರುವಾರ ನಡೆದಿದೆ.

ಚನ್ನಪಟ್ಟಣ ಗ್ರಾಮದ ರಾಘವೇಂದ್ರ ರವರ ತೋಟದಲ್ಲಿರುವ ಸುಮಾರು ಮೂವತ್ತು ಅಡಿ ಆಳದ ನೀರಿರುವ ಬಾವಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಹೋರಿ ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಯವರು ಕಾರ್ಯಾಚರಣೆ ನಡೆಸಿ, ಸ್ಥಳೀಯರ ಸಹಕಾರದೊಂದಿಗೆ ಹೋರಿಯನ್ನು ರಕ್ಷಿಸಿ ವಾರಸುದಾರರಿಗೆ ಹೋರಿಯನ್ನು ಹಸ್ತಾಂತರಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಗ್ನಶಾಮಕ ಠಾಣೆಯ ಠಾಣಾಧಿಕಾರಿ ಕೆ. ಮಹಾಬಲೇಶ್ವರ, ಸಿಬ್ಬಂದಿಗಳಾದ ನಾಗರಾಜ್, ಎಂ.ಆರ್. ಮಂಜುನಾಥ ಶ್ರೀಶೈಲ ಚಿಪ್ಪಲಕಟ್ಟಿ, ಎನ್. ಪರಶುರಾಮಪ್ಪ, ಮಂಜುನಾಥ ಎಂ.ವಡ್ಡರ್, ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಇದನ್ನು ಒದಿ : https://cnewstv.in/?p=10168

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

Leave a Reply

Your email address will not be published. Required fields are marked *

*