ನಕಲಿ ಅಂಕಪಟ್ಟಿ ನೀಡಿ ಕೆಲಸ ಗಿಟ್ಟಿಸಿಕೊಂಡವರ ವಿರುದ್ಧ ಪ್ರಕರಣ ದಾಖಲು.
Cnewstv.in / 16.06.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ನಕಲಿ ಅಂಕಪಟ್ಟಿ ನೀಡಿ ಕೆಲಸ ಗಿಟ್ಟಿಸಿಕೊಂಡವರ ವಿರುದ್ಧ ಪ್ರಕರಣ ದಾಖಲು.
ಶಿವಮೊಗ್ಗ : ನಕಲಿ ಅಂಕಪಟ್ಟಿ ನೀಡಿ ಕೆಲಸ ಗಿಟ್ಟಿಸಿಕೊಂಡಿದ್ದ ಇಬ್ಬರು, ಅದೇ ನಕಲಿ ಅಂಕಪಟ್ಟಿಯಿಂದ ಕೆಲಸ ಕಳೆದುಕೊಂಡು ಠಾಣೆಯ ಮೆಟ್ಟಿಲೇರಿದ್ದಾರೆ.
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಕೆಲಸ ಪಡೆಯುವ ಉದ್ದೇಶದಿಂದ ಮಹಿಳೆ ಸೇರಿ ಇಬ್ಬರು ನಕಲಿ ಅಂಕಪಟ್ಟಿ ಹಾಜರುಪಡಿಸಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಲಾಗಿದೆ ಹಾಗೂ ಕೆಲಸ ಪಡೆಯುವುದಕ್ಕಾಗಿ ಅಡ್ಡದಾರಿ ಹಿಡಿದ ಕಾರಣ ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.
ತೀರ್ಥಹಳ್ಳಿಯ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಮಂಜಪ್ಪ ಎಂಬಾತನು ತನ್ನ 7ನೇತರಗತಿಯ ಅಂಕಪಟ್ಟಿಯನ್ನು ನಕಲು ಮಾಡಿರುವುದು ದೃಢಪಟ್ಟಿ ಹಿನ್ನಲೆಯಲ್ಲಿ ಕೆಲಸದಿಂದ ವಜಾಗೊಳಿಸಲಾಗಿದೆ.
ನಕಲಿ ಅಂಕಪಟ್ಟಿ ಗೆ ಸಹಿಹಾಕಿರುವ ಟ್ಯಾಂಕ್ ಮೊಹಲ್ಲಾದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಜಾನಕ್ಕಮ್ಮ ವಿರುದ್ದ ಪ್ರಕರಣ ದಾಖಲಾಗಿದೆ.
ತೀರ್ಥಹಳ್ಳಿಯ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಅದೇಶ ಜಾರಿಕಾರಾದ ತೀರ್ಥಮ್ಮನವರು ಕೆಲಸಕ್ಕೆ ಸೇರಲು 7ನೇತರಗತಿಯ ಅಂಕಪಟ್ಟಿಯನ್ನು ನಕಲು ಮಾಡಿರುವುದು ದೃಢಪಟ್ಟಿ ಹಿನ್ನಲೆಯಲ್ಲಿ ಕೆಲಸದಿಂದ ವಜಾಗೊಳಿಸಲಾಗಿದೆ.
ನಕಲಿ ಅಂಕಪಟ್ಟಿ ಗೆ ಸಹಿಹಾಕಿರುವ ಸುರಹೊನ್ನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾ ಕೇಸರಪ್ಪ ವಿರುದ್ದ ಪ್ರಕರಣ ದಾಖಲಾಗಿದೆ..
ಇದನ್ನು ಒದಿ : https://cnewstv.in/?p=10157
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ನಕಲಿ ಅಂಕಪಟ್ಟಿ ನೀಡಿ ಕೆಲಸ ಗಿಟ್ಟಿಸಿಕೊಂಡವರ ವಿರುದ್ಧ ಪ್ರಕರಣ ದಾಖಲು. 2022-06-16
Recent Comments