ದೇವಸ್ಥಾನದ ಹುಂಡಿ ಕದ್ದ ಕಳ್ಳರನ್ನು ಬಂಧಿಸಲು ಹೋದ ಪೊಲೀಸರು ಬೇಧಿಸಿದ್ದು 2 ಪ್ರಕರಣ..
Cnewstv.in / 14.06.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ದೇವಸ್ಥಾನದ ಹುಂಡಿ ಕದ್ದ ಕಳ್ಳರನ್ನು ಬಂಧಿಸಲು ಹೋದ ಪೊಲೀಸರು ಬೇಧಿಸಿದ್ದು 2 ಪ್ರಕರಣ..
ಶಿವಮೊಗ್ಗ : ದೇವಸ್ಥಾನದ ಹುಂಡಿ ಹಣವನ್ನು ಕದ್ದ ಕಳ್ಳರನ್ನು ಬಂಧಿಸಲು ಹೋದ ಪೊಲೀಸರು ಮತ್ತೆರಡು ಪ್ರಕರಣಗಳನ್ನು ಬೇಧಿಸಿದ್ದಾರೆ..
ಭದ್ರಾವತಿ ತಾಲೂಕಿನ ಕುಮಾರಿ ನಾರಾಯಣಪುರ ಗ್ರಾಮದ ಚೌಡಮ್ಮ ದೇವಸ್ಥಾನದ ಬಾಗಿಲ ಬೀಗ ಮುರಿದು ಕಾಣಿಕೆ ಹುಂಡಿಯನ್ನು ಹಾಗೂ ಅದರಲ್ಲಿದ್ದ 20 ರಿಂದ 30 ಸಾವಿರ ರೂಪಾಯಿ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ದೂರು ದಾಖಲಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಗ್ರಾಮಾಂತರ ಠಾಣಾ ಸಿಬ್ಬಂದಿಗಳು ವಸಂತ ರಾಜು ಹಾಗೂ ಶ್ವೇತಾ ಎಂಬ ಆರೋಪಿಗಳನ್ನು ಬಂಧಿಸಿದ್ದರು. ನಂತರ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ದೇವಸ್ಥಾನದ ಹುಂಡಿ ಕಳ್ಳತನ ಪ್ರಕರಣವನ್ನು ಹೊರತುಪಡಿಸಿ, ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆ ಹಾಗೂ ಹೊಳೆಹೊನ್ನೂರು ಪೊಲೀಸ್ ಠಾಣೆಯ ಎರಡು ಹಗಲು ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 10,25,000 ರೂ ಗಳ ಒಟ್ಟು 220 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು 132 ಗ್ರಾಂ ತೂಕದ ಬೆಳ್ಳಿ ಆಭರಣಗಳು ಮತ್ತು 5000 ರೂಪಾಯಿ ನಗದು ಹಣವನ್ನು ಅಮಾನತು ಪಡಿಸಿಕೊಂಡಿದ್ದಾರೆ.
ಇದನ್ನು ಒದಿ : https://cnewstv.in/?p=10139
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ದೇವಸ್ಥಾನದ ಹುಂಡಿ ಕದ್ದ ಕಳ್ಳರನ್ನು ಬಂಧಿಸಲು ಹೋದ ಪೊಲೀಸರು ಬೇಧಿಸಿದ್ದು 2 ಪ್ರಕರಣ.. 2022-06-14
Recent Comments