8 ಮಂದಿ ಅಡಿಕೆ ಕಳ್ಳರ ಬಂಧನ. 50 ಲಕ್ಷ ಮೌಲ್ಯದ ಅಡಿಕೆ ವಶ.
Cnewstv.in / 07.06.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
8 ಮಂದಿ ಅಡಿಕೆ ಕಳ್ಳರ ಬಂಧನ. 50 ಲಕ್ಷ ಮೌಲ್ಯದ ಅಡಿಕೆ ವಶ.
ಶಿವಮೊಗ್ಗ : ಸಾಗರ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು 50 ಲಕ್ಷ ಮೌಲ್ಯದ ಅಡಿಕೆ ಕಳ್ಳರ ಬಂಧನ ಮಾಡಲಾಗಿದೆ.
ಸಾಗರ ತಾಲೂಕಿನ ದೊಂಬೆ ಗ್ರಾಮದ ಮನೆಯೊಂದರಲ್ಲಿ 675 kg ಅಡಿಕೆಯನ್ನು ಕಟಾವು ಮಾಡಿ 12 ಚೀಲಗಳಲ್ಲಿ ತುಂಬಿ ಮನೆಯ ಬಳಿ ಉಗ್ರಾಣದಲ್ಲಿಸಂಗ್ರಹಿಸಿಡಲಾಗಿತ್ತು ಅದನ್ನು ಯಾರೋ ಕಳ್ಳರು ಕಳ್ಳತನ ಮಾಡಿದರು ಇದರನ್ವಯ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ಅರಂಭಿಸಿದ ಸಾಗರ ಗ್ರಾಮಾಂತರ ಪಿಐ ಹಾಗೂ ಸಿಬ್ಬಂದಿಗಳು, ಯಶೋಧರಾ ಮಂಜುನಾಥ, ವರುಣ್, ಸಂದೇಶ್, ಶಶಾಂಕ್, ಕಾರ್ತಿಕ್, ಸಂದೀಪ್, ಶಾರೂಕ್ ಅಲಿ ಎಂಬ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿಸಲಾಗಿದ್ದ ಆರೋಪಿಗಳಿಂದ ಮೇಲ್ಕಂಡ ಪ್ರಕರಣ ಸೇರಿದಂತೆ ಒಟ್ಟು ಸಾಗರ ತಾಲೂಕಿನ ವಿವಿಧೆಡೆ 7 ಅಡಿಕೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂದಾಜು ಮೌಲ್ಯ 50 ಲಕ್ಷ ರೂಪಾಯಿಯ, 805 ಕೆಜಿ ಸಿಪ್ಪೆ ಗೋಟು ಅಡಿಕೆ, 349 ಕೆಜಿ ಕೆಂಪು ಅಡಿಕೆ, 200 ಕೆಜಿ ಬಿಳಿ ಗೋಟು ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಓಮಿನಿ ವಾಹನ, 2 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನು ಒದಿ : https://cnewstv.in/?p=10070
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
8 ಮಂದಿ ಅಡಿಕೆ ಕಳ್ಳರ ಬಂಧನ. 50 ಲಕ್ಷ ಮೌಲ್ಯದ ಅಡಿಕೆ ವಶ. 2022-06-07
Recent Comments