Breaking News

IRCTC : ಇನ್ನು ಮುಂದೆ ತಿಂಗಳಿಗೆ 24 ಟಿಕೆಟ್ ಬುಕ್ ಮಾಡಲು ಅವಕಾಶ. ‌

Cnewstv.in / 07.06.2022 / ನವದೆಹಲಿ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

IRCTC : ಇನ್ನು ಮುಂದೆ ತಿಂಗಳಿಗೆ 24 ಟಿಕೆಟ್ ಬುಕ್ ಮಾಡಲು ಅವಕಾಶ. ‌

ನವದೆಹಲಿ : IRCTC ಬಳಕೆದಾರರಿಗೆ ಶುಭಸುದ್ದಿಯನ್ನು ರೈಲ್ವೆ ಇಲಾಖೆ ನೀಡಿದೆ. ಇನ್ನುಮುಂದೆ IRCTC ಆ್ಯಪ್ ಅಥವಾ ವೆಬ್ ನೈಟ್ ನಲ್ಲಿ ತಿಂಗಳಿಗೆ 24 ರ ವರೆಗೆ ರೈಲ್ವೆ ಟಿಕೆಟ್ ಬುಕಿಂಗ್ ಮಾಡಬಹುದು.

ಈ ಹಿಂದೆ ಆಧಾರ್‌ಗೆ ಲಿಂಕ್ ಮಾಡದ ಖಾತೆಗಳನ್ನು ಹೊಂದಿರುವ IRCTC ಬಳಕೆದಾರರು ಗರಿಷ್ಠ 6 ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದ್ದರೆ, ಆಧಾರ್‌ನೊಂದಿಗೆ ಲಿಂಕ್ ಅಗಿರುವ ಖಾತೆಗಳಿಗೆ ಗರಿಷ್ಠ 12 ಬುಕಿಂಗ್‌ಗಳನ್ನು ಅನುಮತಿಸಲಾಗಿತ್ತು.

ಆಧಾರ್‌ಗೆ ಲಿಂಕ್ ಮಾಡಿರುವ ಜನರು ಈಗ ತಿಂಗಳಿಗೆ ಗರಿಷ್ಠ 24 ಟಿಕೆಟ್‌ಗಳನ್ನು ಬುಕ್ ಮಾಡಬಹುಯ. ರೈಲು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.

ಈ ಹಿಂದೆ ಆಧಾರ್‌ ಲಿಂಕ್‌ ಆಗಿರುವ ಖಾತೆಗಳಲ್ಲಿ ತಿಂಗಳಿಗೆ ಗರಿಷ್ಠ 12 ಮತ್ತು ಆಧಾರ್‌ ಲಿಂಕ್‌ ಆಗದ ಖಾತೆಗಳ ಮೂಲಕ ತಿಂಗಳಿಗೆ ಗರಿಷ್ಠ 6 ಟಿಕೆಟ್‌ ಬುಕಿಂಗ್‌ಗೆ ಮಾತ್ರ ಅವಕಾಶವಿತ್ತು.

ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವ ಮೊದಲು ಪ್ರಯಾಣಿಕರು ತಮ್ಮ ಫೋನ್ ಸಂಖ್ಯೆಗಳು ಮತ್ತು ಇಮೇಲ್ ಐಡಿಗಳನ್ನು ಪರಿಶೀಲಿಸುವುದನ್ನು ಕಡ್ಡಾಯಗೊಳಿಸಿದೆ.

ಇದನ್ನು ಒದಿ : https://cnewstv.in/?p=10068

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*