Breaking News

ಕಂದಕಕ್ಕೆ ಉರುಳಿಬಿದ್ದ ಯಾತ್ರಾರ್ಥಿಗಳ ಬಸ್, ಮೃತರ ಸಂಖ್ಯೆ 22 ಕ್ಕೆ ಏರಿಕೆ.

Cnewstv.in / 06.06.2022 / ಉತ್ತರಪ್ರದೇಶ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ಕಂದಕಕ್ಕೆ ಉರುಳಿಬಿದ್ದ ಯಾತ್ರಾರ್ಥಿಗಳ ಬಸ್, ಮೃತರ ಸಂಖ್ಯೆ 22 ಕ್ಕೆ ಏರಿಕೆ.

ಡೆಹ್ರಾಡೂನ್ : ಯಾತ್ರಾರ್ಥಿಗಳು ಪ್ರಯಾಣ ಮಾಡುತ್ತಿದ್ದ ಬಸ್ಸ್ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಮೃತದ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ.

ಸುಮಾರು 40 ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿಬಿದ್ದಿದ್ದೆ. ಮಧ್ಯಪ್ರದೇಶದ ಯಾತ್ರಾರ್ಥಿಗಳು ಯಮುನೋತ್ರಿ ಕಡೆಗೆ ಪ್ರಯಾಣಿಸುತ್ತಿದ್ದ ಬಸ್ ಉತ್ತರಾಖಂಡದ ದಮ್ತಾದಲ್ಲಿ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯ ಬಳಿ ಕಮರಿಗೆ ಬಿದ್ದಿದ್ದು ಪರಿಣಾಮವಾಗಿ 22 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಸ್ಥಿತಿ ಗಂಭೀರವಾಗಿದೆ.

ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡಗಳ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಯಾತ್ರಾರ್ಥಿಗಳ ಸಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.

ಇದನ್ನು ಒದಿ : https://cnewstv.in/?p=10059

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*