Breaking News

ರಾಷ್ಟ್ರಕವಿ ಕುವೆಂಪು ಅಪಮಾನಿಸಿದ ರೋಹಿತ್ ಚಕ್ರತೀರ್ಥರನ್ನು ಬಂಧಿಸಿ, ತನಿಖೆ ನಡೆಸಬೇಕು – ಕರ್ನಾಟಕ ರಕ್ಷಣಾ ವೇದಿಕೆ.

Cnewstv.in / 01.06.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.

ರಾಷ್ಟ್ರಕವಿ ಕುವೆಂಪು ಅಪಮಾನಿಸಿದ ರೋಹಿತ್ ಚಕ್ರತೀರ್ಥರನ್ನು ಬಂಧಿಸಿ, ತನಿಖೆ ನಡೆಸಬೇಕು – ಕರ್ನಾಟಕ ರಕ್ಷಣಾ ವೇದಿಕೆ.

ಶಿವಮೊಗ್ಗ : ರಾಷ್ಟ್ರಕವಿ ಕುವೆಂಪುರವರನ್ನು ಅವಮಾನಿಸಿ, ನಾಡಗೀತೆ ಅಪಚಾರವೆಸಗಿದ ರೋಹಿತ್ ಚಕ್ರತೀರ್ಥನ ಮೇಲೆ ಈ ಕೂಡಲೇ ಪ್ರಥಮ ವರ್ತಮಾನ ವರದಿ (ಎಫ್‌ಐಆರ್) ದಾಖಲಿಸಿ ಆತನನ್ನ ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ವತಿಯಿಂದ ಅಗ್ರಹಿಸಲಾಯಿತು.

ಸರ್ಕಾರದ ದಾಖಲೆಗಳೇ ಅಧಿಕೃತಗೊಳಿಸಿರುವ ಸಮಸ್ತ ನಾಡಿನ ಹೆಮ್ಮೆಯ ನಾಡಗೀತೆಯನ್ನು ತಿರುಚಿವಿಕೃತವಾಗಿ ಬರೆದು ಈ ರೋಹಿತ್ ಚಕ್ರತೀರ್ಥ ಎಂಬಾತನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಲ್ಲದೆ ವಿಕೃತಿ ಮೆರದಿದ್ದನು. ಆಗಾಗ್ಗೆ ಟ್ರೋಲ್ ಮಾಡಿ ಆತೀ ವ್ಯಂಗ್ಯವಾಗಿ ಕನ್ನಡಪರ ಹೋರಾಟಗಾರರ ಮೇಲೆ, ಲೇಖಕರ ಮೇಲೆ, ಕನ್ನಡ ಭಾಷೆಯ ಮೇಲೆ ಸಲ್ಲದ ಬರಹಗಳನ್ನು ಬರೆಯುತ್ತಿದ್ದ ಈತನೀಗ ನಮ್ಮ ಮಲೆನಾಡಿನ ಕೀರ್ತಿಯನ್ನು ಜಗದ ಉದ್ದಗಲದಲ್ಲಿ ಸಾರಿದ ಜೀವಪರ ನಿಲುವಿನ ಮಾನವತಾವಾದಿ ರಾಷ್ಟ್ರಕವಿ ಕುವೆಂಪುರವರನ್ನೇ ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಅಪಮಾನಿಸಿ ಉಲ್ಲೇಖಿಸಿರುವ, ನಾಡಗೀತೆಗೆ ಅಗೌರವಿಸಿ ಸಮರ್ಥಿಸಿಕೊಳ್ಳುವ ಈತನ
ವರ್ತನೆಯಿಂದ ಮಲೆನಾಡಿಗರಿಗೆ ಹಾಗೂ ನಾಡಿನ ಜನತೆಗೆ ಅತೀವ ನೋವು ಹಾಗೂ ಆತಂಕವನ್ನು ತರಿಸಿದೆ.

ಇಂತಹ ಬಹುದೊಡ್ಡ ಕವಿತ್ವವನ್ನು ಕಟ್ಟಿಕೊಟ್ಟ ಕುವೆಂಪುರವರ ಬಗ್ಗೆಯೇ ಅಪಮಾನಕರವಾಗಿ ನಡೆದುಕೊಳ್ಳುವ ಈತನ ಹಿಂದೆ ಬಹುದೊಡ್ಡ ಜಾಲವೇ ಇದೆ. ಇದನ್ನು ತನಿಖಿಸಬೇಕು ಹಾಗೂ ಇವನ ಹಿಂದಿರುವ ಜಾಲವನ್ನು ಬಯಲು ಮಾಡಿ ಕೇಸು ದಾಖಲಿಸಬೇಕೆಂದು ವಿನಂತಿಸಿದರು.

ಇದನ್ನು ಒದಿ : https://cnewstv.in/?p=10013

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.

Leave a Reply

Your email address will not be published. Required fields are marked *

*