ಹಳೆ ದ್ವೇಷದ ಹಿನ್ನೆಲೆ ಹೊಸಮನೆ ರಸ್ತೆ ಮಧ್ಯದಲ್ಲಿ ಯುವಕನಿಗೆ ಜೀವ ಬೆದರಿಕೆ..
Cnewstv.in / 30.05.2022 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399.
ಹಳೆ ದ್ವೇಷದ ಹಿನ್ನೆಲೆ ಹೊಸಮನೆ ರಸ್ತೆ ಮಧ್ಯದಲ್ಲಿ ಯುವಕನಿಗೆ ಜೀವ ಬೆದರಿಕೆ..
ಶಿವಮೊಗ್ಗ : ಹಳೆ ದ್ವೇಷದ ಹಿನ್ನೆಲೆಯಲ್ಲಿ ಹೊಸಮನೆ ಮುಖ್ಯರಸ್ತೆಯಲ್ಲಿಯೇ ಯುವಕನಿಗೆ ಅಡ್ಡಗಟ್ಟಿ ಥಳಿಸಿ, ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.
ನಗರದ ಹೊಸಮನೆ ಬಡಾವಣೆಯ ಓಂ ಸರ್ಕಲ್ ನಲ್ಲಿ ಪರಶುರಾಮ ಮತ್ತು ನವೀನ್ ಎಂಬುವವರು ರಾಮಾಂಜನಿ ಎಂಬ ಯುವಕನಿಗೆ ರಸ್ತೆ ಮಧ್ಯೆ ಅಡ್ಡಗಟ್ಟಿ ಹಲ್ಲೆಗೆ ಮುಂದಾಗಿದ್ದಾರೆ.
ಈ ಹಿಂದೆಯೇ ಆರೋಪಿಗಳಿಗೂ ಹಾಗೂ ರಾಮಾಂಜನಿ ನಡುವೆ ಗಲಾಟೆ ಆಗಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೇ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿತ್ತು. ಮತ್ತೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಒದಿ : https://cnewstv.in/?p=10002
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ : 9916660399.
ಹಳೆ ದ್ವೇಷದ ಹಿನ್ನೆಲೆ ಹೊಸಮನೆ ರಸ್ತೆ ಮಧ್ಯದಲ್ಲಿ ಯುವಕನಿಗೆ ಜೀವ ಬೆದರಿಕೆ.. 2022-05-30