ಭಾರತದ ಉಕ್ಕಿನ ಮನುಷ್ಯ ಎಂದೇ ಬಿಂಬಿತವಾಗಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಇಂದು 11.30 ಕ್ಕೆ ” ಐಕ್ಯತಾ ಪ್ರತಿಮೆ” ಪ್ರತಿಮೆ ಇಂದು ಅನಾವರಣವಾಗಲಿದೆ.. ಸರ್ದಾರ್ ಸರೋವರ ತಟದಲ್ಲಿ ನರ್ಮದಾ ಡ್ಯಾಂ ಕಡೆ ಮುಖ ಮಾಡಿ ನಿರ್ಮಿತವಾಗಿರುವ ಈ ಪ್ರತಿಮೆ ವಿಶ್ವದಲ್ಲೇ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ.ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿಗಿಂತ ನಾಲ್ಕು ಪಟ್ಟು ಎತ್ತರ ಅಂದರೆ ಸುಮಾರು 600 ಅಡಿ ಇರುವ ಸರ್ದಾರ್ ಪಟೇಲರ ಉಕ್ಕಿನ ಪ್ರತಿಮೆ ಈಗ ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. ಐಕ್ಯತಾ ...
Read More »ರಾಷ್ಟ್ರೀಯ
ದೆಹಲಿಯ ಕೆಂಪು ಕೋಟೆಯಲ್ಲಿ ನೇತಾಜಿಗೆ ನಮನ
ನವದೆಹಲಿ: ಸಾಮಾನ್ಯವಾಗಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನ ಕೆಂಪು ಕೋಟೆ ಮೇಲೆ ಧ್ವಜಾರೋಹಣ ಮಾಡಲಾಗುತ್ತಿತ್ತು ಅದರೆ ಇಂದು ಸುಭಾಷ್ ಚಂದ್ರ ಬೋಸ್ ಅವರು ಸ್ಥಾಪಿಸಿದ್ದ ಆಝಾದ್ ಹಿಂದ್ ಗೌರ್ನಮೆಂಟ್ ನ ಸ್ಥಾಪನೆಯಾಗಿ 75 ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಸುಭಾಷ್ ಚಂದ್ರ ಬೋಸರಿಗೆ ಗೌರವ ಸಲ್ಲಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ತ್ರಿವರ್ಣ ಧ್ವಜಾರೋಹಣ ಮಾಡಿದ್ದರು. ಮತ್ತು ಆಝಾದ್ ಹಿಂದ್ ಫೌಜ್ ಮ್ಯೂಸಿಯಂ ಗೆ ಶಿಲಾನ್ಯಾಸ ನೆರವೇರಿಸಿದರು. 1943 ಅ.21 ರಂದು ನೇತಾಜಿ ಸುಭಾಷ್ ಚಂದ್ರ ಬೋಸರು ಭಾರತ ದೇಶದ ಪ್ರಥಮ ಸ್ವಾಯತ್ತ ಸರ್ಕಾರವನ್ನು ರಚಿಸಿದ್ದರು. ...
Read More »ನಾಯಿಗಳಿಗಾಗಿಯೇ ಮೀಸಲಾದ ದೇಶದ ಮೊದಲ ಉದ್ಯಾನವನ
ಹೈದರಾಬಾದ್: ನಾಯಿಗಳಿಗಾಗಿಯೇ ಮೀಸಲಾದ ದೇಶದ ಮೊದಲ ಉದ್ಯಾನವನ ಇಲ್ಲಿನ ಕೊಂಡಾಪುರ್ ಪ್ರದೇಶದಲ್ಲಿ ಉದ್ಘಾಟನೆಯಾಗಿದೆ. 1.3 ಎಕರೆ ಪ್ರದೇಶದಲ್ಲಿರುವ ಈ ಕೇಂದ್ರ ನಾಯಿಗಳಿಗೆ ಅನುಕೂಲವಾದ ನಡಿಗೆಪಥ, ವಿಹಾರಕ್ಕೆ ಅನುಕೂಲವಾದ ಜಾಗ, ಕ್ಲಿನಿಕ್ ಸಹ ಒಳಗೊಂಡಿದೆ. ಈ ಉದ್ಯಾನವನ್ನು ತೆಲಂಗಾಣ ಮುಖ್ಯ ಕಾರ್ಯದರ್ಶಿ ಎಸ್.ಕೆ. ಜೋಶಿ ಉದ್ಘಾಟಿಸಿದರು. ‘₹1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಉದ್ಯಾನದಲ್ಲಿ ಸಾಕುಪ್ರಾಣಿಗಳಿಗೆ ಉಚಿತ ಲಸಿಕೆ, ಆರೋಗ್ಯ ತಪಾಸಣೆ ಮಾಡಲಾಗುತ್ತೆ. ಜತೆಗೆ ವ್ಯದ್ಯರು ಹಾಗೂ ತರಬೇತುದಾರರನ್ನು ನೇಮಕ ಮಾಡಲಾಗುವುದು’ ಎಂದು ಹೈದರಾಬಾದ್ ಪುರಸಭೆಯ ವಲಯ ಆಯುಕ್ತ ಹರಿಚಂದನ ತಿಳಿಸಿದರು.’ನಾಯಿಗಳಿಗೆ ತರಬೇತಿ ಮತ್ತು ವ್ಯಾಯಾಮಕ್ಕೆ ಅನುಕೂಲವಾದ ...
Read More »ಕಾಶ್ಮೀರದಲ್ಲಿ ಮೂವರು ಉಗ್ರರನ್ನು ಸದೆಬಡಿದ ಭಾರತೀಯ ಸೇನೆ
ಪುಲ್ವಾಮಾ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಹತ್ಯೆಯಾದ ಮೂವರು ಭಯೋತ್ಪಾದಕರೂ ತೆಹ್ರಿಕ್ ಉಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದವರೆಂಬುದು ತಿಳಿದುಬಂದಿದೆ. ಕಾಶ್ಮೀರ: ಎನ್ ಕೌಂಟರ್ ದಾಳಿಯಲ್ಲಿ ಮೂವರು ಉಗ್ರರ ಹತ್ಯೆ ಬುಧವಾರವಷ್ಟೇ ಶ್ರೀನಗರದಲ್ಲಿ ನಡೆದಿದ್ದ ಎನ್ ಕೌಂಟರ್ ದಾಳಿಯಲ್ಲಿ ಮೂವರು ಉಗ್ರರನ್ನು ಸದೆಬಡಿಯುವಲ್ಲಿ ಸೇನೆ ಯಶಸ್ವಿಯಾಗಿತ್ತು. ಈ ಸಂದರ್ಭದಲ್ಲಿ ಉಗ್ರರು ನಡೆಸಿದ ಪ್ರತಿದಾಳಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದರು.ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಮನನ್ ಬಶಿರ್ ವಾನಿ ...
Read More »ಸುಪ್ರೀಂ ಕೋರ್ಟ್ ತೀರ್ಪನ್ನು ಪುನರ್ ಪರಿಶೀಲಿಸುವಂತೆ ನ್ಯಾಯಾಲಯದ ಮೊರೆ ಹೋದ ಶೈಲಜಾ ವಿಜಯನ್
ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ರಾಷ್ಟ್ರೀಯ ಅಯ್ಯಪ್ಪ ಭಕ್ತರ ಒಕ್ಕೂಟದ ಅಧ್ಯಕ್ಷೆ ಶೈಲಜಾ ವಿಜಯನ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿರುವುದನ್ನು ವಿರೋಧಿಸಿ ದೇಶಾದ್ಯಂತ ಭಕ್ತರು ಪ್ರತಿಭಟನೆ ನಡೆಸುತ್ತಿದ್ದು, ಈ ಮಧ್ಯೆ ಕೇರಳದ ಎಲ್ ಡಿಎಫ್ ಸರ್ಕಾರ ಸುಪ್ರೀಂ ಕೋರ್ಟ್ ಆದೇಶಕ್ಕೆ ಮರು ಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿದ ನಂತರ ಪ್ರತಿಭಟನೆ ತೀವ್ರವಾಗಿದೆ.ಈ ಸಂಬಂಧ ಶೈಲಜಾ ವಿಜಯನ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ, ಎಲ್ಲಾ ವಯಸ್ಸಿನ ಮಹಿಳೆಯರು ಅಯ್ಯಪ್ಪ ...
Read More »ಭಾರತಕ್ಕೆ ಬಿಸಿಗಾಳಿ ಎಚ್ಚರಿಗೆ ಕೊಟ್ಟ ವಿಶ್ವಸಂಸ್ದೆ
ಬಿಸಿಲಿನ ತಾಪಕ್ಕೆ 2015ರಲ್ಲಿ ದೇಶದಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದರು. ಜಾಗತಿಕ ತಾಪಮಾನವೇನಾದರೂ ಜಗತ್ತಿನ ತಾಪಮಾನ ಕೈಗಾರಿಕಾ ಕ್ರಾಂತಿಯ ಸಮಯದ ಹಿಂದಿನ ಮಟ್ಟಕ್ಕಿಂತ 2 ಡಿಗ್ರಿ ಸೆಲ್ಷಿಯಸ್ ಹೆಚ್ಚಾದರೆ ಅದೇ ರೀತಿಯ ಬಿಸಿಗಾಳಿ ಮತ್ತೆ ನಮ್ಮ ದೇಶದ ಹಲವು ಭಾಗಗಳನ್ನು ಆವರಿಸುವ ಅಪಾಯವಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.ಒಂದುವೇಳೆ ಜಗತ್ತಿನ ತಾಪಮಾನ ಕೈಗಾರಿಕಾ ಕ್ರಾಂತಿಯ ಸಮಯದ ಹಿಂದಿನ ಮಟ್ಟಕ್ಕಿಂತ 2 ಡಿಗ್ರಿ ಸೆಲ್ಷಿಯಸ್ ಹೆಚ್ಚಾದರೆ ಉರಿಬಿಸಿಲಿನ ತಾಪದ ಪರಿಣಾಮವನ್ನು ಎದುರಿಸುವ ರಾಷ್ಟ್ರಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಪ್ರಥಮ ಸ್ಥಾನದಲ್ಲಿವೆ ಎಂದು ಯುನಿವರ್ಸಿಟಿ ಆಫ್ ವಾಷಿಂಗ್ಟನ್, ...
Read More »
Recent Comments