Cnewstv.in / 06.08.2021/ ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399 ಶಿವಮೊಗ್ಗ : ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಸಾವಿರಾರು ಭಕ್ತರು ದರ್ಶನಕ್ಕೆಂದು ಆಗಮಿಸುತ್ತಾರೆ ಅದರಲ್ಲಿಯೂ ವಾರಾಂತ್ಯದಲ್ಲಿ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ ಆದರೆ ಈ ಬಾರಿ ಕೊವೀಡ್ ಮೂರನೇ ಅಲೆ ನಿಯಂತ್ರಣ ಮಾಡುವ ಸಂಬಂಧ ವಾರಾಂತ್ಯದಲ್ಲಿ ದೇವಾಲಯದ ಪ್ರವೇಶವನ್ನು ನಿಷೇಧಿಸಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 5.8.2021 ರಿಂದ 15.8.2021 ರವರೆಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸೇವೆ, ಪ್ರಸಾದ, ವಸತಿ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಲಾಗಿದೆ. ವಾರಾಂತ್ಯದಲ್ಲಿ ...
Read More »Tag Archives: ಸಿಗಂದೂರು
ಸಿಗಂದೂರಲ್ಲಿ ನಡೆದ ಘಟನೆ ಶೋಭೆ ತರುವಂತದ್ದಲ್ಲ – ಸಿಎಂ
ಶಿವಮೊಗ್ಗ: ಸಿಗಂದೂರಿನಲ್ಲಿ ಎರಡು ದಿನದ ಹಿಂದೆ ನಡೆದಿರುವ ಘಟನೆ ಯಾರಿಗೂ ಶೋಭೆ ತರುವಂತದ್ದಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಈಗಾಗಲೇ ಜಿಲ್ಲಾಧಿಕಾರಿ ಸಿಗಂದೂರು ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿಸಿಯಿಂದ ಸಿಗಂದೂರು ದೇವಾಲಯದ ಘಟನೆ ಬಗ್ಗೆ ವಿಸ್ತೃತ ವರದಿ ತರಿಸಿಕೊಳ್ಳುತ್ತೇನೆ. ಜೊತೆಗೆ ದೇವಾಲಯದ ಬಗ್ಗೆ ಮುಂದೇನು ಮಾಡಬೇಕು ಎಂಬ ಬಗ್ಗೆ ಶಾಸಕರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ ಸೇರಿದಂತೆ ಪ್ರಮುಖರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಿಎಂ ಹೇಳಿದರು.
Read More »ಸಿಗಂದೂರು ಬಳಿ ಲಾಂಚ್ ನಿಂದ ಶರಾವತಿ ನದಿಗೆ ಹಾರಿ ಅಪರಿಚಿತ ಆತ್ಮಹತ್ಯೆ- Exclusive video
ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಶಿವಮೊಗ್ಗ ಜಿಲ್ಲೆಯ ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಶರಾವತಿ ಹಿನ್ನೀರಿನಲ್ಲಿ ಸಂಚರಿಸುವ ಲಾಂಚ್ ನಿಂದ ನೀರಿಗೆ ಹಾರಿ ಅಪರಿಚಿತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಂಚ್ ಅಂಬಾರಗೋಡ್ಲು ಕಡೆಯಿಂದ ಕಳಸವಳ್ಳಿಗೆ ಹೋಗುವಾಗ ಹಿನ್ನೀರಿನ ಮಧ್ಯೆ ಅಪರಿಚಿತ ವ್ಯಕ್ತಿ ಏಕಾಏಕಿ ನೀರಿಗೆ ಧುಮುಕಿದ್ದಾನೆ. ಲಾಂಚ್ ನ ಸಿಬ್ಬಂದಿ ಆತನನ್ನು ರಕ್ಷಿಸಲು ಪ್ರಯತ್ನಸಿದರಾದರೂ ಅಷ್ಟರಲ್ಲಾಗಲೇ ಆತ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದ್ದಾನೆ. ಮೃತನ ಶವಕ್ಕಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Read More »ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಲಾಂಚ್ ಗಳ ನಡುವೆ ಡಿಕ್ಕಿ..
ಶಿವಮೊಗ್ಗ: ಸಾಗರ ತಾಲೂಕಿನ ಸಿಗಂದೂರು ಬಳಿಯ ಶರಾವತಿಯ ಹಿನ್ನೀರಿನಲ್ಲಿಎರಡು ಲಾಂಚ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ 500 ಕ್ಕುಹ ಹೆಚ್ಚು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶರಾವತಿ ಹಿನ್ನೀರಿನಲ್ಲಿ ಸಂಚರಿಸುವ ಶರಾವತಿ-1 ಹಾಗೂ ಶರಾವತಿ-2 ಲಾಂಚ್ ಗಳ ನಡುವೆ ಅಂಬಾರಗೋಡ್ಲು ದಡದ ಸಮೀಪ ಡಿಕ್ಕಿ ಸಂಭವಿಸಿದೆ. ಲಾಂಚ್ ಚಾಲಕರುಗಳ ನಿರ್ಲಕ್ಷವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಲಾಂಚ್ ಗಳ ಡಿಕ್ಕಿಯಲ್ಲಿ ಎರಡೂ ಲಾಂಚ್ ಗಳೂ ಜಖಂಗೊಂಡಿವೆ. ಆದರೆ ಸಂಚಾರ ನಡೆಸಲು ಯಾವುದೇ ಸಮಸ್ಯೆ ಇಲ್ಲದ ಹಿನ್ನೆಲೆಯಲ್ಲಿ ಅಪಘಾತದ ಬಳಿಕವೂ ಮತ್ತೆ ಸಂಚಾರ ಆರಂಭಿಸಿವೆ.
Read More »
Recent Comments