Breaking News

Tag Archives: ನಾಳೆಯಿಂದ ಶಿವಮೊಗ್ಗ ಬೆಂಗಳೂರು ಜನಶತಾಬ್ದಿ ರೈಲು ಸಂಚಾರ ಆರಂಭ

ನಾಳೆಯಿಂದ ಶಿವಮೊಗ್ಗ ಬೆಂಗಳೂರು ಜನಶತಾಬ್ದಿ ರೈಲು ಸಂಚಾರ ಆರಂಭ

  ಶಿವಮೊಗ್ಗ : ನಾಳೆ ಬೆಳಗ್ಗೆ 5.30ಕ್ಕೆ ಶಿವಮೊಗ್ಗ ಬೆಂಗಳೂರು ಜನಶತಾಬ್ದಿ ರೈಲು ಸಂಚಾರ ಆರಂಭವಾಗಲಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ಸಹಾ ಆಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ರೈಲ್ವೆ ನಿಲ್ದಾಣದ ಮುಂದೆ ಬಾಕ್ಸ್‍ಗಳನ್ನು ಹಾಕಲಾಗಿದೆ ಹಾಗೂ ಆರೋಗ್ಯ ತಪಾಸಣೆ ಮಾಡುವುದಕ್ಕೆ ರೈಲ್ವೆ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಥರ್ಮಲ್ ಸ್ಕ್ರೀನಿಂಗ್‍ಗೆ ಒಳಗಾಗಬೇಕಿರುವ ಹಿನ್ನೆಲೆ, ಪ್ರಯಾಣಿಕರು ನಿಗದಿತ ಸಮಯಕ್ಕಿಂತಲು 90 ನಿಮಿಷ ಮೊದಲೇ ರೈಲ್ವೆ ನಿಲ್ದಾಣ ತಲುಪಬೇಕಿದೆ.ಪ್ರತಿ ಬೋಗಿಗೆ 54 ಪ್ರಯಾಣಿಕರಷ್ಟೇ ಅವಕಾಶ ನೀಡಲಾಗಿದೆ. ಹಾಗಾಗಿ ರೈಲಿನಲ್ಲಿ ಕೇವಲ 648 ಸೀಟುಗಳಷ್ಟೇ ಅವಕಾಶವಿದೆ.

Read More »