ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯಕ್ಕೆ ಸರ್ಕಾರಿ ಬಸ್ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿ ಎನ್ ಎಸ್ ಯುಐ ಕಾರ್ಯಕರ್ತರು ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಶಿವಮೊಗ್ಗದಿಂದ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯಕ್ಕೆ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಖಾಸಗಿ ಬಸ್ ನಲ್ಲಿ ಸಂಚರಿಸುತ್ತಿದ್ದಾರೆ. ಖಾಸಗಿ ಬಸ್ ಪ್ರಯಾಣಕ್ಕಾಗಿ ವಿದ್ಯಾರ್ಥಿಗಳು ಪ್ರತಿ ತಿಂಗಳು 1500 ರೂಪಾಯಿ ವೆಚ್ಚ ಮಾಡಬೇಕಿದೆ. ಇದರಿಂದ ಬಡ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ಮಾರ್ಗದಲ್ಲಿ ಸರ್ಕಾರಿ ಬಸ್ ಗಳು ಸಂಚರಿಸಿದರೆ ವಿದ್ಯಾರ್ಥಿಗಳು 1500 ರೂಪಾಯಿ ನೀಡಿ ವಾರ್ಷಿಕ ಪಾಸ್ ...
Read More »Tag Archives: ಕುವೆಂಪು
ಕುವೆಂಪು ಆಶಿಸಿದ ಭಾರತ ಉಳಿಸಿಕೊಳ್ಳೋಣ: ಬಸವ ಮರಳಸಿದ್ದ ಸ್ವಾಮೀಜಿ
ಶಿವಮೊಗ್ಗ: ಭಾರತದ ಬಲವೇ ಅನೇಕತೆಯಲ್ಲಿ ಏಕತೆ ಎಂಬುದಾಗಿದೆ. ಕುವೆಂಪು ಅವರಂಥ ಮಹಾಕವಿಗಳು ಹೇಳಿದಂತೆ ಹಿಂದೂ, ಕ್ರೈಸ್ತ, ಮುಸಲ್ಮಾನ ಪಾರಸಿಕ ಜೈನರುದ್ಯಾನವೆಂಬುದೇ ಭಾರತದ ಹೆಗ್ಗಳಿಕೆ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಶರಣರು ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಕುವೆಂಪು ಜನ್ಮದಿನದ ಅಂಗವಾಗಿ ನಡೆದ ಸಂವಿಧಾನ ಪ್ರಸ್ತಾವನೆಯ ಓದು, ಕುವೆಂಪು ಗೀತಗಾಯನ, ನಾಡಗೀತೆ ವಾಚನ ಮತ್ತು ಸರ್ವಧರ್ಮ ಸಹಭೋಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲ ಮತ-ಧರ್ಮ, ತತ್ವ, ಸಿದ್ಧಾಂತಗಳಿಗೂ ಈ ದೇಶ ನೆಲೆಯಾಗಿದೆ. ಎಲ್ಲವನ್ನೂ ಪೊರೆದಿದೆ. ಎಲ್ಲರ ಸಹಬಾಳ್ವೆಯ, ಸಾಮರಸ್ಯದಲ್ಲೇ ಎಲ್ಲರ ಹಿತವಿದೆ. ಏಳಿಗೆ ...
Read More »
C News TV Kannada News Online in cnewstv