Breaking News

Tag Archives: ಅಯೋದ್ಯೆ

ರಾಮಮಂದಿರ ಜಾಗ ಹಿಂದುಗಳಿಗೆ ಸೇರಿದ್ದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಐತಿಹಾಸಿಕ ಅಯೋದ್ಯ ವಿವಾದ ಕುರಿತು ಸುಪ್ರೀಂಕೋರ್ಟ್ ಅಂತಿಮ ತೀರ್ಪನ್ನು ನೀಡಿದೆ. ವಿವಾದಿತ ಜಮೀನು ಇನ್ನೂ ಮುಂದೆ ರಾಮಲಲ್ಲಾ ಪಾಲಾಗಿದೆ.. ಮಂದಿರ ನಿರ್ಮಾಣದ ಹೊಣೆಯನ್ನು ಸಿಜೆಐ ಸರ್ಕಾರಕ್ಕೆ ನೀಡಿದೆ, ಇನ್ನೂ ರಾಮಮಂದಿರ ನಿರ್ಮಾಣಕ್ಕೆ ಸರ್ಕಾರ ಮೂರು ತಿಂಗಳೊಳಗೆ ಯೋಜನೆಯನ್ನು ರೂಪಿಸಿ, ನಿರ್ವಹಣೆಯನ್ನು ಟ್ರಸ್ಟಿಗೆ ನೀಡಬೇಕು ಎಂದು ಆದೇಶವನ್ನು ನೀಡಿದ್ದು, ಸಂಪೂರ್ಣ 2.77 ಎಕರೆ  ಟ್ರಸ್ಟ್ ವಶಕ್ಕೆ ನೀಡಲಾಗಿದೆ‌..ಸುನ್ನಿ ವಕ್ಫ್ ಬೋರ್ಡಿಗೆ ಬೇರೆಡೆ ಪರ್ಯಾಯ. 5 ಎಕರೆ ಜಮೀನು ನೀಡಲಾಗುವುದು.

Read More »

ಅಯೋದ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್.

ಶಿವಮೊಗ್ಗ: ಅಯೋಧ್ಯೆ ಅಂತಿಮ ತೀರ್ಪು ಇಂದು ಹೊರಬರಲಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವುದರಿಂದಾಗಿ ಪೊಲೀಸರು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ನಾಳೆ ಈದ್ ಮಿಲಾದ್ ಹಬ್ಬದ‌ಆಚರಣೆಗಾಗಿ ಮುಸ್ಲಿಂ ಸಮುದಾಯದವರು ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ವೇದಿಕೆ ಸೇರಿದಂತೆ ಟಿಪ್ಪು ಹಾಗೂ ಹಸಿರು ಬಾವುಟಗಳನ್ನು ಕಟ್ಟಿದ್ದರು. ಅಷ್ಟರಲ್ಲಾಗಲೇ ಸುಪ್ರೀಂ ಕೋರ್ಟ್ ಇಂದೇ ತೀರ್ಪು ನೀಡುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಅಮೀರ್ ಅಹಮದ್ ವೃತ್ತದಲ್ಲಿ ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

Read More »