ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕ ಕುಮಾರ್ ಬಂಗಾರಪ್ಪ, ಜೆಡಿಎಸ್ ನವರು ಅಬಂರೀಷ್ ಸಾವಿನಲ್ಲೂ ರಾಜಕಾರಣ ಮಾಡಿದ್ದರೆ. ರಾಜ್ಯದ ಜನರಿಗೂ ಮೋಸ ಮಾಡಿದ್ದಾರೆ. ಇವರು ಮಾಡಿರುವ ಮೋಸಕ್ಕೆ ತುಮಕೂರು, ಮಂಡ್ಯ ಹಾಸನ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.. ಇನ್ನು ಶಿವಮೊಗ್ಗ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ಒಬ್ಬ ಇಂಪೋರ್ಟೆಡ್ ಕ್ಯಾಂಡಿಡೇಟ್. ಆತ ಮಂಗನಕಾಯಿಲೆ ವಿಷಯದಲ್ಲೂ ರಾಜಕಾರಣ ಮಾಡುತ್ತಿದ್ದಾನೆ. ಮಧುಬಂಗಾರಪ್ಪನವರಿಗೆ ಲೂಟಿ ಮಾಡುವುದು ಹೇಗೆ ಎಂದು ಅವರಿಗೆ ಗೊತ್ತಿದೆ. ಶರಾವತಿ ಡೆಂಟಲ್ ಕಾಲೇಜು, ಬಗರ್ ಹುಕುಂ ನಲ್ಲೂ ಮಧುಬಂಗಾರಪ್ಪ ಲೂಟಿ ...
Read More »Tag Archives: Shimoga
ರಾಘವೇಂದ್ರ 2 ಲಕ್ಷಕ್ಕೂ ಅಧಿಕ ಮತಗಳಿಂದ ಜಯ ಗಳಿಸುತ್ತಾರೆ – ಬಿಎಸ್ ವೈ.
ಶಿವಮೊಗ್ಗಕ್ಕೆ ಕಾಂಗ್ರೆಸ್ಸಿನಿಂದ ಯಾರು ಪ್ರಚಾರ ಬರ್ತಾರೋ ಬಿಡ್ತಾರೋ ಬಿಡ್ತಾರೋ, ಸರ್ಕಾರವೇ ಬಂದು ಶಿವಮೊಗ್ಗದಲ್ಲಿ ಪ್ರಚಾರ ಮಾಡಿದರು ರಾಘವೇಂದ್ರ ಎರಡು ಲಕ್ಷಕ್ಕೂ ಅಧಿಕ ಮತಗಳಿಂದ ಜಯ ಗಳಿಸುತ್ತಾರೆ .ಈ ಲೋಕಸಭಾ ಚುನಾವಣೆ ನಂತರ ರಾಜ್ಯ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ. ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಾಗ ತಮಿಳು ಸಮಾಜದ ಇಬ್ಬರು ಮುಖಂಡರಿಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗ ಮಾಡುತ್ತೇನೆ ಎಂದು ಭದ್ರಾವತಿಯಲ್ಲಿ ಮಾಧ್ಯಮದವರೊಂದಿಗೆ ಬಿಎಸ್ ಯಡಿಯೂರಪ್ಪನವರು ಹೇಳಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮಕೂರು, ಮಂಡ್ಯ ಹಾಸನದಲ್ಲಿ ಮೊದಲು ಗೆಲ್ಲಲಿ ಬಳಿಕ ಶಿವಮೊಗ್ಗ ಕ್ಷೇತ್ರದತ್ತ ಗಮನಹರಿಸಲಿ ಎಂದ ಬಿಎಸ್ ವೈ. ...
Read More »ಮಾನವೀಯತೆ ಮೆರೆದ ಟ್ರೆಡಿಷನಲ್ ಡೇ.
ಶಿವಮೊಗ್ಗ: ಕಾಲೇಜುಗಳ ಟ್ರಡಿಷನಲ್ ಡೇ ಎಂದರೆ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚುತ್ತಿರುತ್ತಾರೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮವೂ ಭರ್ಜರಿಯಾಗಿಯೇ ನಡೆಯುತ್ತದೆ. ವಿದ್ಯಾರ್ಥಿಗಳು ಈ ದಿನಗಾಗಿಯೇ ಕಾಯುತ್ತಿರುತ್ತಾರೆ…ಆದರೆ ಇವೆಲ್ಲವುಗಳೊಂದಿಗೆ ಸಾಮಾಜಿಕ ಜವಾಬ್ದಾರಿಯೊಂದಿಗೆ ಮಾನವೀಯತೆ ಮೆರೆದ ಶಿವಮೊಗ್ಗ ಎಟಿಎನ್ ಸಿ ಸಂಜೆ ಕಾಲೇಜಿನ ವಿದ್ಯಾರ್ಥಿಗಳು ಟ್ರಡಿಷನಲ್ ಡೆ ಗೆ ಹೊಸ ಭಾಷ್ಯವನ್ನೇ ಬರೆದಿದ್ದಾರೆ. ಎಟಿಎನ್ ಸಿ ಕಾಲೇಜಿನ ವಿದ್ಯಾರ್ಥಿಗಳು ಟ್ರಡಿಷನಲ್ ಡೆ ಹಾಗೂ ಯುಗಾದಿ ಹಬ್ಬದ ಅಂಗವಾಗಿ ತಮ್ಮ ಅಧ್ಯಾಪಕೊಂದಿಗೆ ಸೇರಿ ಅಕ್ಕಿ ಸಂಗ್ರಹಿಸಿ ಸಂಗ್ರಹವಾದ ಅಕ್ಕಿಯನ್ನು ತಾಯಿಮನೆ ಸಂಸ್ಥೆ ಗೆ ನೀಡಿ ಮಾನವೀಯತೆ ಮೆರೆದಿದ್ದಾರೆ…
Read More »ಶಿವಮೊಗ್ಗ ಲೋಕಸಭಾ ಚುನಾವಣಾ ಅಖಾಡದಲ್ಲಿ 14 ಅಭ್ಯರ್ಥಿಗಳು…
ಶಿವಮೊಗ್ಗ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಲು ಒಟ್ಟು 14 ಅಭ್ಯರ್ಥಿಗಳು 26 ನಾಮಪತ್ರಗಳನ್ನು ಸಲ್ಲಿಸಿದ್ದು 14 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರವಾಗಿದೆ.. ಇಬ್ಬರೂ ಮಾಜಿ ಮುಖ್ಯಮಂತ್ರಿ ಮಕ್ಕಳ ಪೈಪೋಟಿಯ ನಡುವೆಯೂ ಸಹ ಪ್ರತ್ಯೇಕ ಅಭ್ಯರ್ಥಿಗಳು ತಮ್ಮ ಗೆಲುವಿನ ಬಗ್ಗೆ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.. ಶಿವಮೊಗ್ಗ ಲೋಕಸಭಾ ಚುನಾವಣೆಯ ಕಣದಲ್ಲಿ ಇರುವಂತಹ 14 ಅಭ್ಯರ್ಥಿಗಳ ವಿವರ.. ಅಭ್ಯರ್ಥಿಯ ಹೆಸರು ಮತ್ತು ಪಕ್ಷದ ಹೆಸರು 1. ಶೇಖರ್ ನಾಯ್ಕ್ – ಪಕ್ಷೇತರ 2.ಬಿ.ವೈ. ರಾಘವೇಂದ್ರ – ಬಿ.ಜೆ.ಪಿ 3.ಎಸ್ ಮಧು ಬಂಗಾರಪ್ಪ ...
Read More »ಪ್ರಜಾಕೀಯ ಪಕ್ಷ ದಿಂದ ಕಣಕ್ಕಿಳಿದ ಅಭ್ಯರ್ಥಿ
ಶಿವಮೊಗ್ಗ ಲೋಕಸಭಾ ಚುನಾವಣೆಗೆ ಈ ಬಾರಿ ಖ್ಯಾತ ಚಲನಚಿತ್ರ ನಟ ರಿಯಲ್ ಸ್ಟಾರ್ ಉಪೇಂದ್ರ ರವರ ಉತ್ತಮ ಪ್ರಜಾತೀಯ ಪಕ್ಷದಿಂದ ಶರಾವತಿ ನಗರ ವೆಂಕಟೇಶ್ ಕಣಕ್ಕಿಳಿದಿದೆ. ಇಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ವೆಂಕಟೇಶ್, ನಮ್ಮ ಪಕ್ಷ ಜನವೇ ಪ್ರಚಾರ ಮಾಡುವ ಪಕ್ಷ. ನಾವು ಕೇವಲ ಅವರ ಸೇವಕರು. ಈ ಬಾರಿ ಪ್ರಜ್ಞಾಪೂರ್ವಕ ನಾಗರಿಕರು ನಮಗೆ ಮತ ಹಾಕುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
Read More »ಹೆಲಿಕಾಪ್ಟರ್‌ನಲ್ಲಿಯೇ ಪ್ರಚಾರ ಮಾಡಲಿರುವ ಅಭ್ಯರ್ಥಿ...
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನಯ್ ರಾಜಾವತ್ ಈ ಬಾರಿಯೂ ಲೋಕಸಭೆ ಚುನಾವಣೆಯಲ್ಲಿಯೂ ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಕಣಕ್ಕಿಳಿಯಲಿದ್ದಾರೆ..ಕಳೆದ ಬಾರಿ ಶಿಕಾರಿಪುರದಿಂದ ಸ್ಪರ್ಧಿಸಲು ಹೆಲಿಕಾಪ್ಟರ್‌ನಲ್ಲಿ ಬಂದು ಗಮನ ಸೆಳೆದಿದ್ದ ವಿನಯ್ ರಾಜಾವತ್, ಈ ಬಾರಿಯೂ ನಾಮಪತ್ರ ಸಲ್ಲಿಸಲು ಹೆಲಿಕಾಪ್ಟರ್‌ನಲ್ಲಿಯೇ ತೆರಳಲಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ಹೆಲಿಕಾಪ್ಟರ್‌ನಲ್ಲಿಯೇ ಸುತ್ತಾಡಿ ಪ್ರಚಾರ ಮಾಡಲಿದ್ದಾರೆ.
Read More »ಜಿಲ್ಲೆಯಲ್ಲಿ ಮತದಾನ ಜಾಗೃತಿಗಾಗಿ ಸಿದ್ಧವಾಗಿದೆ ಸಾಂಗ್
2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನವಾಗಬೇಕು. ರಾಜ್ಯದಲ್ಲಿಯೇ ಶಿವಮೊಗ್ಗ ಜಿಲ್ಲೆ ಮತದಾನದಲ್ಲಿ ನಂಬರ್ ಒನ್ ಆಗಬೇಕು. ಈ ಉದ್ದೇಶದಿಂದ ಜಿಲ್ಲಾಡಳಿತದಿಂದ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ನಿಟ್ಟಿನಲ್ಲಿ ಮತದಾರರ ಜಾಗೃತಿಗಾಗಿ ಥೀಮ್ ಸಾಂಗ್ ರಚಿಸಿದ್ದು ಅದನ್ನು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಇಂದು ಕುವೆಂಪು ರಂಗಮಂದಿರದಲ್ಲಿ ಬಿಡುಗಡೆ ಮಾಡಿದರು.. ಥೀಮ್ ಸಾಂಗ್ ನ ಸಂಗೀತ ನಿರ್ದೇಶನವನ್ನು ಅಮಿತ್ ಎಸ್ ಕುಮಾರ್ ಮಾಡಿದ್ದು, ಗೀತ ರಚನೆಯನ್ನು ಸಮನ್ವಯ ಕಾಶಿ ಮತ್ತು ಕವಿ ನಿತಿನ್ ಜಯ್, ವಿಠ್ಠಲ ರಂಗಧೋಳ್ ಮಾಡಿದ್ದು, ಥೀಮ್ ಸಾಂಗ್ ...
Read More »ಲಾರಿಗಳ ಮುಖಾಮುಖಿ ಡಿಕ್ಕಿ ಮೂವರ ಸಾವು
ಶಿವಮೊಗ್ಗ: ಸಾಗರ ತಾಲೂಕಿನ ಆನಂದಪುರ ಸಮೀಪದ ಐಗಿನಬೈಲು ಕ್ರಾಸ್ ಬಳಿ ಶನಿವಾರ ಬೆಳಗಿನ ಜಾವ ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ಹಾಗೂ ಡಾಂಬರು ತುಂಬಿದ ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ಸಾಗರ ಕಡೆಗೆ ಬರುತ್ತಿದ್ದು, ಡಾಂಬರ್ ತುಂಬಿದ ಲಾರಿ ಶಿವಮೊಗ್ಗ ಕಡೆ ಹೋಗುತ್ತಿತ್ತು ಎನ್ನಲಾಗಿದೆ. ಅಪಘಾತದಲ್ಲಿ ಡಾಂಬರ್ ಲಾರಿಯ ಚಾಲಕ ಸೋಮವಾರ ಪೇಟೆಯ ಸಚಿನ್ (25) ಕಂಡಕ್ಟರ್ ಬಿಜಾಪುರದ ತಾಳಿಕೋಟೆ ಮಲಕಪ್ಪ(22)ಮತ್ತು ಗ್ಯಾಸ್ ಲಾರಿಯ ಚಾಲಕ ಶಿಕಾರಿಪುರದ ಕಲವತ್ತಿಯ ಲೋಕೇಶ್(42) ಮೃತಪಟ್ಟಿದ್ದಾರೆ. ...
Read More »ದಾಖಲೆ ಇಲ್ಲದ 2 ಕೋಟಿ ವಶ.
ಸಾಗರ ತಾಲೂಕಿನ ಅಮಟಿಕೊಪ್ಪದ ಚೆಕ್ ಪೋಸ್ಟ್ ಹತ್ತಿರ 2 ಕೋಟಿ ಹಣವನ್ನು ಎರ್ಟಿಗಾ ಕಾರ್ ನಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್ ನ ಅಸಿಸ್ಟೆಂಟ್ ಮ್ಯಾನೇಜರ್ ತೆಗೆದುಕೊಂಡು ಹೋಗುತ್ತಿದ್ದರು.ಅನುಮಾನಗೊಂಡು ಪ್ಲೇಯಿಂಗ್ ಸ್ಕ್ವಾಡ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸರಿಯಾದ ದಾಖಲೆ ಇಲ್ಲದ ಕಾರಣ ಅಧಿಕಾರಿಗಳು ಐಟಿಯವರ ವಶಕ್ಕೆ ಹಣವನ್ನು ಒಪ್ಪಿಸಿದ್ದಾರೆ…
Read More »ಒಂದೇ ಮರಕ್ಕೆ ನೇಣು ಹಾಕಿಕೊಂಡು ಸ್ನೇಹಿತರು.
ಮಒಂದೇ ಮರಕ್ಕೆ ನೇಣು ಹಾಕಿಕೊಂಡು ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟಕ ಹೊಸನಗರದ ಮಾರಿಗುಡ್ಡದಲ್ಲಿ ನಡೆದಿದ್ದೆ..ಶ್ರೀಕಾಂತ್(29) ಮತ್ತು ಪ್ರಕಾಶ (32) ಮೃತ ಸ್ನೇಹಿತರು .ಸ್ಮಶಾನದಲ್ಲಿಯೇ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಇಬ್ಬರು ಹೊಸನಗರದಲ್ಲಿ ಕೂಲಿಕಾರ್ಮಿಕರಾಗಿದ್ದ, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
Read More »
C News TV Kannada News Online in cnewstv