ಕೊರೋನಾ ಮಹಾಮಾರಿಯನ್ನು ತಡೆಯಲು ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿವಾರ್ಡಿನಲ್ಲಿ ತಂಡಗಳನ್ನು ರಚಿಸಬೇಕು : ಆಯನೂರು ಮಂಜುನಾಥ್

 

Cnewstv.in / Shivamogga / 22.05.2021 / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

ಶಿವಮೊಗ್ಗ : ಕೊರೋನಾ 2ನೇ ಅಲೆ ಶಿವಮೊಗ್ಗದಲ್ಲಿ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಪಾಲಿಕೆ ಸದಸ್ಯರು ತಮ್ಮ ತಮ್ಮ ವಾರ್ಡ್ಗಳಲ್ಲಿ ತಂಡಗಳನ್ನು ರಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಎಲ್ಲಾ 35 ವಾರ್ಡ್ಗಳಲ್ಲಿಯೂ ಆಯಾ ವಾರ್ಡಿನ ಪಾಲಿಕೆ ಸದಸ್ಯರು ಕೋವಿಡ್ ಮುಕ್ತ ವಾರ್ಡ್ ಆಗಿ ಮಾಡಲು ಶ್ರಮಿಸಬೇಕು. ಸೋಂಕು ತಗುಲಿದವರನ್ನು ಗುರುತಿಸಿ ಅವರನ್ನು ಆರೈಕೆ ಕೇಂದ್ರಕ್ಕೆ ಸೇರಿಸಲು ಅಗತ್ಯ ಕ್ರಮ ತಕ್ಷಣವೇ ತೆಗೆದುಕೊಳ್ಳಬೇಕು. ಇದಕ್ಕಾಗಿ ಆರೋಗ್ಯ ಸಿಬ್ಬಂದಿಗಳನ್ನು ಕಾಯಬಾರದು ಮತ್ತು ಬಹಳ ಮುಖ್ಯವಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ಹೊರಹೋಗದಂತೆ ನೋಡಿಕೊಳ್ಳಬೇಕು. ಜನರ ಜೀವ ಜೀವನ ಕಾಪಾಡುವ ಕೆಲಸವನ್ನು ಪಾಲಿಕೆ ಸದಸ್ಯರೆ ನೋಡಿಕೊಳ್ಳಬೇಕು ಎಂದರು.

ಆಯಾ ವಾರ್ಡಿನಲ್ಲಿರುವ ದಾನಿಗಳನ್ನು ಗುರುತಿಸಿ ಅವರಿಂದ ನೆರವು ಪಡೆದು ಬಡ ಸೋಂಕಿತರಿಗೆ ಊಟ, ಉಪಚಾರ, ಔಷಧಿ, ಮಾಸ್ಕ್ಗಳನ್ನು ನೀಡಬೇಕು. ಸಂಚಾರ ನಿಯಮಗಳನ್ನು ನೋಡಿಕೊಳ್ಳಬೇಕು. ಪ್ರತಿ ವಾರ್ಡಿನಲ್ಲೂ ಒಂದು ಆರೈಕೆ ಕೇಂದ್ರ ಇರಬೇಕು ಎಂದು ಆಯನೂರು ಮಂಜುನಾಥ್ ಹೇಳಿದರು.

ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399

Leave a Reply

Your email address will not be published. Required fields are marked *

*