ಶಿವಮೊಗ್ಗ : ಕೊಡಚಾದ್ರಿ ಹಿಡ್ಲಮನೆ ಜಲಪಾತ ನೋಡಲು ಬಂದು ಪ್ರಪಾತದಿಂದ 80 ಅಡಿಗಳ ಮೇಲೆ ಸಿಲುಕಿಕೊಂಡ ಅಮೋಘ (29) ಎಂಬ ಯುವಕನನ್ನು ಅಗ್ನಿಶಾಮಕ ದಳ, ಅರಣ್ಯ ಸಿಬ್ಬಂದಿಗಳು ಹಾಗೂ ಸ್ಥಳೀಯರು ಸೇರಿದಂತೆ 50ಕ್ಕೂ ಹೆಚ್ಚು ಜನರ ತಂಡ ಸತತ 5 ಗಂಟೆಗಳ ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಹಾಸನ ಮೂಲದ ಅಮೋಘ ತಮಿಳುನಾಡು ಮೂಲದ ಸಂಜೀವ್ ಕಪೂರ್ ಮೂಲದ ಮಧು ಎಂಬುವರು ಕೊಡಚಾದ್ರಿ ಪ್ರವಾಸಕ್ಕೆ ಶನಿವಾರ ರಾತ್ರಿ ಬಂದು ಹೋಂಸ್ಟೇನಲ್ಲಿ ತಂಗಿದ್ದರು. ಬೆಳಿಗ್ಗೆ ಜೀಪಿನಲ್ಲಿ ಕೊಡಚಾದ್ರಿ ಗಿರಿ ಹತ್ತಿ ನಂತರ ಹಿಡ್ಲಮನೆ ಜಲಪಾತಕ್ಕೆ ತೆರಳಿದ್ದರು. ಅದರೆ ಪರ್ಸನ ಪಕ್ಕದಲ್ಲೇ ಕೆಳಗಿಳಿಯಲು ಹೋದ ಅಮೋಘ ಅಲೆ ಸಿಲುಕಿಕೊಂಡಿದ್ದಾರೆ ಇನ್ನಿಬ್ಬರು ಬೇರೆ ಮಾರ್ಗದಿಂದ ಕೆಳಗಿಳಿಸಿದ್ದಾರೆ.
ಮಧ್ಯಭಾಗದಲ್ಲಿ ಸಿಕ್ಕಿಬಿದ್ದಿದ್ದ ಅಮೋಘ ಮೇಲೇರಲು ಆಗದೆ ಕೆಳಗಿಳಿಯಲೂ ಆಗದೆ ಸ್ಥಿತಿಯಲ್ಲಿದ್ದರೂ ಅಲ್ಲೆ ಸಿಕ್ಕ ಕಲ್ಲಿನ ಮೇಲೆ ಒಂದೇ ಕಾಲಿನಲ್ಲಿ ಎರಡು ಗಂಟೆಗಳ ಕಾಲ ನಿಂತಿದ್ದರು. ಸ್ವಲ್ಪ ಆಯ ತಪ್ಪಿದರೂ 80 ಅಡಿ ಕೆಳಗಿನ ಜಲಪಾತದ ಪ್ರಪಾತಕ್ಕೆ ಬೀಳುವ ಸಾಧ್ಯತೆ ಇತ್ತು.