ಕೆಲ ದಿನಗಳ ಹಿಂದೆ ಪಾಕಿಸ್ತಾನ ಮಾಧ್ಯಮವೊಂದು ಭಾರತವನ್ನ ಹೀಯಾಳಿಸುವ ರೀತಿ ಜಾಹೀರಾತು ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಪುಲ್ವಾಮ ದಾಳಿ ಬಳಿಕ ಪಾಕ್ ಗಡಿಯೊಳಗೆ ನುಗ್ಗಿ ಬಾಲ್ ಕೋಟ್ ಮೇಲೆ ಏರ್ ಸ್ಟ್ರೈಕ್ ಮಾಡಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಂತೆ ಕಾಣುವ ವ್ಯಕ್ತಿಯನ್ನ ಬಳಸಿಕೊಂಡು ಭಾರತವನ್ನ ಅಣುಕಿಸುವಂತಹ ಜಾಹೀರಾತು ಮಾಡಿ ಟಿವಿಯಲ್ಲಿ ಪ್ರಸಾರ ಮಾಡಿದೆ. ಇದಕ್ಕೆ ಈಗ ಪಾರೂಲ್ ಯಾದವ್ ಸರಿಯಾದ ಪ್ರತಿಕ್ರಿಯೆ ನೀಡಿದ್ದಾರೆ. ಅಭಿನಂದನ್ ಅವರ ರೀತಿಯ ಮೀಸೆ ಧರಿಸಿ ಅದೇ ಜಾಹಿರಾತಿನ ಮೂಲಕ ಪಾಕಿಸ್ತಾನಕ್ಕೆ ಪಂಚ್ ನೀಡಿದ್ದಾರೆ. ಟೀ ಕಪ್ ನೀವೆ ಇಟ್ಟುಕೊಳ್ಳಿ, ನಾವು ವರ್ಲ್ಡ್ ಗೆಲ್ಲುತ್ತೇವೆ ಎಂದು ಪಾರೂಲ್ ಉತ್ತರ ನೀಡಿದ್ದಾರೆ.
Recent Comments