Cnewstv / 29.08.2024 / ಶಿವಮೊಗ್ಗ / ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಶಿಕಾರಿಪುರದ ಟೋಲ್‍ಗೇಟ್ ತೆರವುಗೊಳಿಸುವಂತೆ ಅಗ್ರಹಿಸಿ ಪ್ರತಿಭಟನೆ…
ಶಿವಮೊಗ್ಗ: ಅನಧಿಕೃತವಾಗಿ ಅಳವಡಿಸಿದ ಟೋಲ್‍ಗೇಟ್‍ಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಶಿಕಾರಿಪುರದ ಟೋಲ್‍ಗೇಟ್ ವಿರೋಧಿ ಹೋರಾಟ ಸಮಿತಿ ವತಿಯಿಂದ ಇಂದು ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖೆಗಳ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.
ಶಿಕಾರಿಪುರ ಮಾರ್ಗವಾಗಿ ಹಾದುಹೋಗಿರುವ 57ನೇ ರಾಜ್ಯ ಹೆದ್ದಾರಿಯಾದ ಶಿವಮೊಗ್ಗ-ಹಾನಗಲ್ ನಡುವೆ ರಾಜ್ಯ ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಟೋಲ್‍ನ್ನು ಕೂಡಲೇ ತೆಗೆದು ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
2013ರ ರಾಷ್ಟ್ರೀಯ ಹೆದ್ದಾರಿ ಕಾಯ್ದೆ ಅಡಿಯಲ್ಲಿ ಟೋಲ್ ನಿರ್ಮಾಣ ಮಾಡಲು ಹಲವು ನಿಬಂಧನೆಗಳನ್ನು ವಿಧಿಸಿದೆ. ರಾಜ್ಯ ಸರ್ಕಾರ ಹೀಗೆ ಟೋಲ್ ಗೇಟ್‍ನ್ನು ನಿರ್ಮಿಸುವಾಗ ನಿಯಮಗಳನ್ನು ಅನುಸರಿಸಲೇಬೇಕು. ಆದರೆ ನಿಯಮಕ್ಕೆ ವಿರುದ್ಧವಾಗಿ ಈ ಗೇಟ್‍ಗಳನ್ನು ಅವಳಡಿಸಲಾಗಿದೆ ಎಂದು ದೂರಿದರು.
ಯಾವುದೇ ಟೋಲ್‍ನ್ನು ಅಳವಡಿಸುವಾಗ ಕನಿಷ್ಠ 60 ಕಿ.ಮೀ. ಅಂತರವಿರಬೇಕು ಎಂದು ನಿಯಮವಿದೆ. ಆದರೆ, ಈ ರಸ್ತೆಯಲ್ಲಿ ಕಲ್ಲಾಪುರ ಮತ್ತು ಕುಟ್ರಳ್ಳಿಯಲ್ಲಿ ನಿರ್ಮಿಸಿರುವ ಟೋಲ್‍ಗೇಟ್‍ಗಳು ಕೇವಲ 30 ಕಿ.ಮೀ. ಅಂತರದಲ್ಲಿವೆ. ಇದು ನಿಯಮಬಾಹಿರವಾಗಿದೆ. ಅಲ್ಲದೇ 20 ಕಿಮೀ. ಒಳಗಿರುವವರೆಗೆ ತಿಂಗಳಿಗೆ 150ರಂತೆ ಪಾಸ್ ಕೊಡಲು ಕೂಡ ನಿಯಮದಲ್ಲಿ ಅವಕಾಶವಿದೆ. ಆದರೆ ಈ ನಿಯಮಗಳನ್ನು ಅವರು ಅನುಸರಿಸುತ್ತಿಲ್ಲ ಎಂದು ಆರೋಪಿಸಿದರು.
ಈ ಟೋಲ್‍ಗೇಟ್‍ಗಳಿಂದ ಬಡವರಿಗೆ ಹೊರೆಯಾಗಿದೆ. ಸ್ಥಳೀಯ ನಿವಾಸಿಗಳಿಗೆ ರೈತ ಬಾಂಧವರಿಗೆ ಆಸ್ಪತ್ರೆಗೆ ಓಡಾಡುವವರಿಗೆ ಪ್ರತಿನಿತ್ಯದ ಕಚೇರಿಗಳಿಗೆ ಹೋಗುವವರಿಗೆ ಆರ್ಥಿಕ ಹೊರೆಯಾಗುತ್ತಿದೆ. ಸ್ಥಳೀಯರು ತಾಲ್ಲೂಕು ಕೇಂದ್ರಕ್ಕೆ ಓಡಾಡಲು ತುಂಬಾ ಕಷ್ಟವಾಗುತ್ತಿರುವುದರಿಂದ ಈ ಟೋಲ್‍ಗೇಟ್‍ಗಳನ್ನು ತೆರವುಗೊಳಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಸಮಿತಿಯ ಅಧ್ಯಕ್ಷ ಹಾಗೂ ವಕೀಲ ಶಿವರಾಜ್‍ಪಾಟೀಲ್, ವಿನಾಯಕ ಪಾಟೀಲ್, ಅಬ್ದುಲ್ ನವೀದ್, ಪುಟ್ಟಣ್ಣ ಗೌಡರು, ಶಿವರಾಜ್, ಶೇಖರಪ್ಪ, ಮನ್ಸೂರ್‍ಖಾನ್, ಅಭೀದ್, ಹರೀಶ್‍ಗೌಡ, ಮಂಜುನಾಥ್‍ನಾಯ್ಕ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ಸುದ್ದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ 9916660399..
ಇದನ್ನು ಒದಿ..
Recent Comments